ಮಾಜಿ ಸೈನಿಕನ ಮೇಲೆ ಹಲ್ಲೆ: ರಕ್ಷಣೆ ನೀಡುವಂತೆ ಕುಟುಂಬದ ಮನವಿ - Attack on Retired Soldier in Karwar
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9883656-thumbnail-3x2-es.jpg)
ಕಾರವಾರ: ಎರಡು ದಶಕಗಳ ಕಾಲ ದೇಶ ಸೇವೆ ಮಾಡಿ ನಿವೃತ್ತಿ ಹೊಂದಿದ್ದ ಯೋಧ ಕೂಡಿಟ್ಟ ಹಣದಿಂದ ಸಣ್ಣದೊಂದು ಉದ್ಯಮ ಆರಂಭಿಸಿ ಬದುಕು ಕಟ್ಟಿಕೊಳ್ಳಲು ಮುಂದಾಗಿದ್ದರು. ಆದರೆ ಜಮೀನಿನ ವಿಷಯಕ್ಕೆ ಕ್ಯಾತೆ ತೆಗೆದು ಹತ್ತಾರು ಜನರ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿದ್ದು, ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ. ಈ ನಡುವೆ ಹಲ್ಲೆ ನಡೆಸಿದ ಗುಂಪು ಮತ್ತೆ ಕುಟುಂಬಕ್ಕೆ ಜೀವ ಬೆದರಿಕೆ ಒಡ್ಡಿರುವ ಆರೋಪ ಕೇಳಿಬಂದಿದ್ದು ರಕ್ಷಣೆ ನೀಡುವಂತೆ ಇದೀಗ ಅವರ ಪತ್ನಿ ಜಿಲ್ಲಾಡಳಿತದ ಬಳಿ ಮನವಿ ಮಾಡಿದ್ದಾರೆ.