ಬಾಡಿಗೆ ವಿಚಾರವಾಗಿ ಆಟೋ ಚಾಲಕ, ಪ್ರಯಾಣಿಕನ ಮಧ್ಯೆ ಮಾರಾಮಾರಿ: ವಿಡಿಯೋ - Chitradurg Auto driver, commotion between passenger News
🎬 Watch Now: Feature Video
ಚಿತ್ರದುರ್ಗ ನಗರದಲ್ಲಿ ಆಟೋ ಬಾಡಿಗೆ ವಿಚಾರವಾಗಿ ಆಟೋ ಚಾಲಕ ಹಾಗೂ ಪ್ರಯಾಣಿಕನ ನಡುವೆ ಮಾರಾಮಾರಿಯಾಗಿರುವ ವಿಡಿಯೋವೊಂದು ವೈರಲ್ ಆಗಿದೆ. ಈ ಘಟನೆ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ನಡೆದಿದೆ. ಆಟೋದಲ್ಲಿ ಪ್ರಯಾಣ ಬೆಳೆಸಿದ ಯುವಕನೊಬ್ಬ ನಿಗದಿತ ದರವನ್ನು ನೀಡಿದ ಬೆನ್ನಲ್ಲೇ ಚಾಲಕ ಹಾಗೂ ಯುವಕನ ನಡುವೆ ಮಾತಿನ ಚಕಮಕಿ ನಡೆದು, ವಾಗ್ವಾದ ವಿಕೋಪಕ್ಕೆ ತಿರುಗಿದೆ. ಕೊನೆಗೆ ಹೊಡೆದಾಟ ಸಹ ನಡೆದಿದೆ ಎನ್ನಲಾಗಿದೆ. ಮಾರಾಮಾರಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚಿತ್ರದುರ್ಗದ ಕೋಟೆ ಪೊಲೀಸ್ ಠಾಣೆಯ ಪೊಲೀಸರು ಯುವಕರಿಬ್ಬರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.