ಬೀರೂರು: ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆದ ಅಂತರಘಟ್ಟಮ್ಮ ದೇವಿ ರಥೋತ್ಸವ - Kadur Taluk in Chikkamagalur District
🎬 Watch Now: Feature Video
ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಬೀರೂರು ನಗರದ ಕರಗಲ್ ಬೀದಿಯಲ್ಲಿರುವ ಬೀರೂರು ಗ್ರಾಮದೇವತೆ ಅಂತರಘಟ್ಟಮ್ಮ ದೇವಿ ರಥೋತ್ಸವ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು. ರಥವು ಹಳೇಪೇಟೆಯ ವೀರಾಂಜನೇಯ ದೇವಾಲಯದ ಬಳಿ ಸರಿದು ನಿಂತ ಬಳಿಕ ರಥವನ್ನು ಹಿಂಬಾಲಿಸಿ ಬಂದಿದ್ದ ಪಾನಕದ ಎತ್ತಿನ ಬಂಡಿಗಳ ಓಟಕ್ಕೆ ಅವಕಾಶ ಮಾಡಿಕೊಡಲಾಯಿತು. ಎತ್ತುಗಳು ತನ್ನನ್ನು ನಿಯಂತ್ರಿಸಲು ಯತ್ನಿಸುತ್ತಿದ್ದ ಗಾಡಿಯ ಒಡೆಯನ ಬಾರುಕೋಲು ಏಟು ಮತ್ತು ಮೂಗುದಾರ ನಿಯಂತ್ರಣ ಮೀರಿ ಶರವೇಗದಲ್ಲಿ ಮಹಾನವಮಿ ಬಯಲಿನ ಕಡೆ ಓಡಿ ನೋಡುಗರ ಎದೆಯಲ್ಲಿ ರೋಮಾಂಚನ ಮೂಡಿಸಿದವು. ನಂತರ ಅಂತರಘಟ್ಟಮ್ಮ ರಥೋತ್ಸವದ ಅಂಗವಾಗಿ ಅಮ್ಮನವರಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಬೇವಿನ ಸೀರೆ ಸೇವೆ, ಹೋಳಿಗೆ ಸೇವೆ ನೈವೇದ್ಯ ಸಮರ್ಪಿಸಿದ ಬಳಿಕ ದೇವಾಲಯದ ಮುಂಭಾಗದಲ್ಲಿ ಅಲಂಕೃತ ರಥದಲ್ಲಿ ಉತ್ಸವ ಮೂರ್ತಿಯನ್ನು ಕೂರಿಸಲಾಯಿತು.