ಭರ್ತಿಯಾದ ಆನೆಕೆರೆಗೆ ಸಂಸದ ಶಿವಕುಮಾರ ಉದಾಸಿ ಬಾಗಿನ ಅರ್ಪಣೆ - bagina by mp shivkumar udasi
🎬 Watch Now: Feature Video

ಸತತ ಮಳೆಯಿಂದಾಗಿ ಮೈದುಂಬಿ ಹರಿಯುತ್ತಿರುವ ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದ ಹೊರವಲಯದ ಆನೆಕೆರೆಗೆ ಇಂದು ಸಂಸದ ಶಿವಕುಮಾರ ಉದಾಸಿ, ಶಾಸಕ ಸಿ.ಎಂ.ಉದಾಸಿ ಕುಟುಂಬ ಸಮೇತ ಆಗಮಿಸಿ ಬಾಗಿನ ಅರ್ಪಿಸಿದರು. ಇಲ್ಲಿನ ಸುತ್ತಮುತ್ತಲಿನ ಕೃಷಿಕರು ಈ ಕೆರೆ ನೀರನ್ನೇ ಅವಲಂಬಿಸಿದ್ದಾರೆ. ಇದೀಗ ಹಾನಗಲ್ ಪಟ್ಟಣದ ಜನರ ಜೀವನಾಡಿಯಾಗಿರುವ ಕೆರೆ ಮೈದುಂಬಿ ಹರಿಯುತ್ತಿರುವುದು ಸಂತಸ ತಂದಿದೆ ಎಂದು ಉದಾಸಿ ತಿಳಿಸಿದರು. ಕಾರ್ಯಕ್ರಮದಲ್ಲಿ, ಬಿಜೆಪಿ ತಾಲೂಕಾಧ್ಯಕ್ಷ ರಾಜು ಗೌಳಿ, ಶಿವಲಿಂಗಪ್ಪ ತಲ್ಲೂರ, ಬಿ.ಎಸ್.ಅಕ್ಕಿವಳ್ಳಿ,ಸಿದ್ದಿಂಗಪ್ಪ ಶಂಕ್ರಿಕೊಪ್ಪ,ಚಂದ್ರಪ್ಪ ಜಾಲಗಾರ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಇದ್ದರು.