ತುಮಕೂರು: ಸಿದ್ದಗಂಗಾ ಜೈವಿಕ ವನದ ಬಳಿ ಆಕಸ್ಮಿಕ ಬೆಂಕಿ - ತುಮಕೂರು ಸಿದ್ಧಗಂಗಾ ಮಠ
🎬 Watch Now: Feature Video
ತುಮಕೂರು: ನಗರದ ಹೊರವಲಯದ ಪಂಡಿತನಹಳ್ಳಿ ಸಮೀಪ ಬಸದಿ ಬೆಟ್ಟದ ಬಳಿ ಇರುವ ಸಿದ್ದಗಂಗಾ ಜೈವಿಕ ವನದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಗಿಡಗಳು ಸುಟ್ಟು ಹೋಗಿವೆ. ಕ್ಯಾತಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದಗಂಗಾ ಸಂಸ್ಥೆಗೆ ಸೇರಿದ ವನ ಸುಮಾರು 17 ಎಕರೆಯಷ್ಟಿದೆ. ಜೈವಿಕ ವನದಲ್ಲಿ ಸಂಘ ಸಂಸ್ಥೆಗಳು, ಮಠ ಹಾಗೂ ಸಾಮಾಜಿಕ ಅರಣ್ಯ ಇಲಾಖೆಯಿಂದ ಸುಮಾರು 3000 ಸಂಖ್ಯೆ ಸಸಿಗಳನ್ನು ನೆಟ್ಟು ಪೋಷಣೆ ಮಾಡುತ್ತಿದೆ. ಸದರಿ ಸಸಿಗಳನ್ನು ನೆಟ್ಟು ಪೋಷಿಸುತ್ತಿರುವ ಸ್ಥಳದಲ್ಲಿ ಕೈಗಾರಿಕೆಗಳಿಂದ ಬರುವ ತ್ಯಾಜ್ಯಗಳಾದ ವೇಸ್ಟ್ ಬಟ್ಟೆ, ಪೇಪರ್ ಇತ್ಯಾದಿಗಳನ್ನು ತಂದು ಸುರಿಯುತ್ತಿದೆ. ಈ ಅನುಪಯುಕ್ತ ವಸ್ತುಗಳಿಗೆ ಬೆಂಕಿ ತಗುಲಿ ಈ ದುರ್ಘಟನೆ ಸಂಭವಿಸಿದೆ. ಆದರೆ, ಯಾವುದೇ ಪ್ರಾಣಹಾನಿ ಅಥವಾ ಪ್ರಾಣಿಗಳಿಗೆ ತೊಂದರೆ ಆಗಿಲ್ಲ. ಸುಮಾರು 25-30 ಸಸಿಗಳು ಬೆಂಕಿಯ ಶಾಖಕ್ಕೆ ಹೊತ್ತಿ ಹೋಗಿವೆ. ವಿಷಯ ತಿಳಿದ ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿಯನ್ನು ನಂದಿಸಿದ್ದಾರೆ.