ಕೃಷ್ಣಾ ನದಿ ಅಬ್ಬರಕ್ಕೆ ಅಲ್ಲಮಪ್ರಭು ದೇವಾಲಯ ಜಲಾವೃತ... ದೂರದಿಂದಲೇ ಕೈ ಮುಗಿದ ಭಕ್ತರು! - Allama Prabhu Temple drown to flood water,
🎬 Watch Now: Feature Video
ಕೃಷ್ಣಾ ನದಿಯಲ್ಲಿ ಪ್ರವಾಹ ಹೆಚ್ಚಿದ ಹಿನ್ನೆಲೆ ಗೂಗಲ್ ಗ್ರಾಮದ ಬಳಿಯ ಶ್ರೀ ಅಲ್ಲಮಪ್ರಭು ದೇವಾಲಯ ಜಲಾವೃತಗೊಂಡಿದೆ. ಜಿಲ್ಲೆಯ ದೇವದುರ್ಗ ತಾಲೂಕಿನ ಗೂಗಲ್ ಬ್ರೀಡ್ಜ್ ಕಂ ಬ್ಯಾರೇಜ್ ಭರ್ತಿಯಿಂದ ಗ್ರಾಮದ ಐತಿಹಾಸಿಕ ಶ್ರೀ ಅಲ್ಲಮಪ್ರಭು ದೇವಾಲಯದ ಸುತ್ತಲು ನೀರು ಆವರಿಸಿದೆ. ಬಸಿಯ ನೀರು ಹೆಚ್ಚಾಗಿ ಗರ್ಭಗುಡಿ ಮುಳಗಡೆಯಾಗಿದೆ. ಇನ್ನು ದೇವಾಲಯದ ಬಳಿಯ ಹೊಟೇಲ್ ಹಾಗೂ ಕಲ್ಯಾಣ ಮಂಟಪಕ್ಕೆ ನೀರು ನುಗ್ಗಿದೆ. ಹೊಲ-ಗದ್ದೆಗಳಿಗೂ ನೀರು ನುಗ್ಗಿದ್ದು, ಗ್ರಾಮದೊಳಗೆ ನೀರು ನುಗ್ಗುವ ಭೀತಿ ಗ್ರಾಮಸ್ಥರಿಗೆ ಎದುರಾಗಿದೆ. ದೇವರ ದರ್ಶನಕ್ಕೆ ಆಗಮಿಸಿದ ಭಕ್ತರು ಹೊರಗಡೆಯಿಂದ ಕೈ ಮುಗಿದ ವಾಪಸಾಗಿದ್ದಾರೆ.