ಬೆಂಗಳೂರು ಇನ್ನೂ ನಾಲ್ಕು ದಿನ ಕೂಲ್ ಕೂಲ್.. ಹವಾಮಾನ ಇಲಾಖೆ - cool weather in bangalore
🎬 Watch Now: Feature Video
ಬೆಂಗಳೂರಿನಲ್ಲಿ ಏರ್ ಕಂಡೀಷನ್ ರೀತಿಯ ವಾತಾವರಣವಿದೆ. ಇನ್ನೂ ಮೂರ್ನಾಲ್ಕು ದಿನ ಇದೇ ರೀತಿ ಕೂಲ್ ವಾತಾವರಣ ಮುಂದುವರಿಯಲಿದೆ. ಇಂದು ಬೆಳಗ್ಗಿನಿಂದಲೇ ಮೋಡ ಮುಸುಕಿದ ವಾತಾವರವಿದ್ದು, ಅಲ್ಲಲ್ಲಿ ತುಂತುರು ಮಳೆಯಾಗಿದೆ. ಪೂರ್ವ ದಿಕ್ಕಿನಿಂದ ಬೀಸುತ್ತಿರುವ ಗಾಳಿ, ಬಂಗಾಳ ಕೊಲ್ಲಿಯಿಂದ ತೇವಾಂಶದ ಜತೆ ಗಾಳಿ ಬರುತ್ತಿರುವುದರಿಂದ ಚಳಿಯ ವಾತಾವರಣವಿದೆ. ಇನ್ನೂ ನಾಲ್ಕು ದಿನಗಳ ಬಳಿಕ ಉತ್ತರದಿಂದ ಗಾಳಿ ಬೀಸಲಿದ್ದು, ಈ ವೇಳೆ ವಾತಾವರಣ ಸರಿಹೋಗಲಿದೆಯೆಂದು ಹವಾಮಾನ ತಜ್ಞ ರಾಜಾ ರಮೇಶ್ ಈಟಿವಿ ಭಾರತ್ಗೆ ತಿಳಿಸಿದರು. ಅಲ್ಲದೇ ಈ ವಾತಾವರಣ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಇದ್ದು, ಜೋರು ಮಳೆಯಾಗುವುದಿಲ್ಲ ಎಂದು ತಿಳಿಸಿದರು.