ಹಾಸನಾಂಬೆಗೆ ವಿವಿಧ ಹೂವುಗಳಿಂದ ವಿಶೇಷ ಅಲಂಕಾರ - A special decoration with different flowers for the hassanambe
🎬 Watch Now: Feature Video
ಹಾಸನ: ಗುರುವಾರ ವರ್ಷಕ್ಕೊಮ್ಮೆಯಷ್ಟೇ ದರ್ಶನ ಭಾಗ್ಯ ಕರುಣಿಸುವ ಹಾಸನದ ಅಧಿದೇವತೆ ಹಾಸನಾಂಬೆ ದೇವಾಲಯದ ಬಾಗಿಲು ತೆರೆಯಲಾಗಿದೆ. ಮಹಾಲಕ್ಷ್ಮಿ, ಮಹಾಕಾಳಿ, ಮಹಾತ್ರಿಪುರ ಸುಂದರಿ ಹೀಗೆ ಹಾಸನಾಂಬೆಗೆ ವಿವಿಧ ನಾಮಗಳಿವೆ. ದರ್ಶನದ ಎರಡನೇ ದಿನವಾದ ಇಂದು ಮುಂಜಾನೆಯಿಂದ ಹಾಸನಾಂಬೆಗೆ ವಿವಿಧ ಹೂವುಗಳಿಂದ ವಿಶೇಷ ಅಲಂಕಾರ ಮಾಡಿ, ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಇಂದಿನಿಂದ 9 ದಿನಗಳ ಕಾಲ ತಾಯಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಕೊನೆಯ ದಿನವಾದ ದೀಪಾವಳಿ ಹಬ್ಬದಂದು ಶಾಸ್ತ್ರೋಕ್ತವಾಗಿ ದೇವಾಲಯದ ಬಾಗಿಲು ಹಾಕಲಾಗುವುದು.