ಮುರಿದು ಬಿದ್ದ ಸೀಲಿಂಗ್ ಫ್ಯಾನ್​: 3 ಸೆಕೆಂಡ್​ ಅಂತರದಲ್ಲಿ ತಲೆ ಉಳಿಸಿಕೊಂಡ ಅಂಗಡಿ ಮಾಲೀಕ: ವಿಡಿಯೋ - fan fallen a man

🎬 Watch Now: Feature Video

thumbnail

By

Published : Nov 24, 2020, 2:41 AM IST

Updated : Nov 24, 2020, 2:47 AM IST

ಉಡುಪಿ : ವೇಗವಾಗಿ ತಿರುಗುತ್ತಿದ್ದ ಸೀಲಿಂಗ್ ಫ್ಯಾನ್ ಇನ್ನೇನು ತಲೆ ಮೇಲೆ ಬಿದ್ದೇ ಬಿಡ್ತು ಎನ್ನುವಷ್ಟರಲ್ಲಿ ಬದಿಗೆ ಸರಿದು ತರಕಾರಿ ವ್ಯಾಪಾರಿಯೊಬ್ಬ ಬಚಾವಾಗಿದ್ದಾನೆ. ಉಡುಪಿ ನಗರದ ಆದಿ ಉಡುಪಿ ಪ್ರದೇಶದಲ್ಲಿ ಈ ಪವಾಡ ಸದೃಶ ಘಟನೆ ನಡೆದಿದೆ. ಸಂಜೆ ವೇಳೆ ತರಕಾರಿ ವ್ಯಾಪಾರದಲ್ಲಿ ನಿರತರಾಗಿದ್ದ ವ್ಯಾಪಾರಿ ಗಿರಾಕಿಗಳು ಬಾರದ ಕಾರಣ ಖಾಲಿ ಕುಳಿತಿದ್ದ. ಈ ವೇಳೆ ಏನೋ ಶಬ್ದ ಕೇಳಿ ಎದ್ದುನಿಂತು ಬದಿಗೆ ಸರಿಯುತ್ತಿದ್ದಂತೆ, ತಲೆ ಮೇಲೆ ತಿರುಗುತ್ತಿದ್ದ ಸೀಲಿಂಗ್ ಫ್ಯಾನ್ ದಿಡೀರನೆ ಮುರಿದುಬಿದ್ದಿದೆ. ತರಕಾರಿ ವ್ಯಾಪಾರಿ ಕುಳಿತ ಭಂಗಿಯಲ್ಲೇ ಇದ್ದಿದ್ದರೆ ಸೀಲಿಂಗ್ ಫ್ಯಾನ್ ನೇರ ಆತನ ತಲೆ ಮೇಲೆ ಬಿದ್ದು ಬಿಡುತ್ತಿತ್ತು. ಅದೃಷ್ಟವಶಾತ್ ಅವಘಢದಿಂದ ತರಕಾರಿ ವ್ಯಾಪಾರಿ ತಪ್ಪಿಸಿಕೊಂಡಿದ್ದಾನೆ. ಇಷ್ಟೂ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದ್ದು ಗಮನಸೆಳೆಯುತ್ತಿದೆ.
Last Updated : Nov 24, 2020, 2:47 AM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.