ದಸರೆಗೆ ದಿನಗಣನೆ: ಇಂದಿನಿಂದ ಕ್ಯಾಪ್ಟನ್ ಅರ್ಜುನನಿಗೆ ಭಾರ ಹೊರುವ ತಾಲೀಮು - ಮೈಸೂರು ದಸರಾ ಮಹೋತ್ಸವ
🎬 Watch Now: Feature Video
ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ ಗಜಪಡೆಗೆ ದಿನದಿಂದ ದಿನಕ್ಕೆ ಜವಾಬ್ದಾರಿ ಹೆಚ್ಚಾಗುತ್ತಿದೆ. ಅರಮನೆ ಆಗಮಿಸಿದ ನಂತರ ಕ್ಯಾಪ್ಟನ್ ಅರ್ಜುನನಿಗೆ ತಾಲೀಮು ನೀಡಲಾಗುತ್ತಿತ್ತು. ಆದರೀಗ ಜಂಬೂಸವಾರಿ ಸರಿಯಾಗಿ 30 ದಿನಗಳು ಬಾಕಿ ಇರುವುದರಿಂದ ತಾಲೀಮಿನ ಶೈಲಿಯನ್ನು ಬದಲಾಯಿಸಲಾಗಿದೆ. 350 ಕೆ.ಜಿ.ತೂಕದ ಮರಳಿನ ಮೂಟೆಗಳ ಭಾರವನ್ನು ಅರ್ಜುನನಿಗೆ ಬೆನ್ನ ಮೇಲೆ ಹಾಕಿ ಇಂದಿನಿಂದ ತಾಲೀಮು ನಡೆಸಲಾಗುತ್ತಿದೆ. ಅರಮನೆಯಿಂದ ಹೊರಟ ಅರ್ಜುನ, ಬನ್ನಿಮಂಟಪದವರೆಗೆ ಸಾಗಿ ವಾಪಸ್ ಆಗಮಿಸಿದ್ದಾನೆ. ವಿಜಯ, ಅಭಿಮನ್ಯು, ವರಲಕ್ಷಿ, ಧನಂಜಯ, ಈಶ್ವರ ಆನೆಗಳು ಅರ್ಜುನನಿಗೆ ಸಾಥ್ ನೀಡಿದ್ವು.