ವಿಷ ಜಂತು ಚೇಳು ಈತನಿಗೆ ಆಟಿಕೆ.. ವಿಡಿಯೋ ವೈರಲ್ - farmer playing with scorpions
🎬 Watch Now: Feature Video
ಕುಷ್ಟಗಿ (ಕೊಪ್ಪಳ): ಚೇಳು ಅಂದ್ರೇ ಜನ ಬೆವರುತ್ತಾರೆ. ಅದೇನಾದ್ರೂ ಕಚ್ಚಿದ್ರೆ ಹರೋಹರಾ.. ಚೇಳು ಕಡಿಸಿಕೊಂಡವರಿಗೆ ಅದರ ಯಾತನೆ ಅನುಭವಕ್ಕೆ ಬರಲು ಸಾದ್ಯ. ಕುಷ್ಟಗಿ ತಾಲೂಕಿನ ಮುದೇನೂರು ಗ್ರಾಮದ ರೈತ ಅಮರೇಶ್ ಆಡಿನ್ ಅವರಿಗೆ ಚೇಳು ಅಂದರೆ ಆಟಿಕೆ ವಸ್ತು. ಅವರು ಗ್ರಾಮದಲ್ಲಿ ಕೆಂಪು ಚೇಳನ್ನು ತಮ್ಮ ಅಂಗೈ ಮೇಲೆ ಹರಿದಾಡಿಸಿರುವ ವಿಡಿಯೋ ವೈರಲ್ ಆಗಿದೆ. ಚೇಳೆಂದ್ರೆ ಮಾರುದ್ದ ದೂರ ಸರಿಯುವ ಜನರ ಮಧ್ಯೆ ಕೃಷಿಕ ಅಮರೇಶ್ ಅವರು ಚೇಳನ್ನು ಲೀಲಾಜಾಲವಾಗಿ ಹಿಡಿದು ಸಲೀಸಾಗಿ ಆಟವಾಡಿಸಿರುವುದು ರೋಚಕ.