ನಿರ್ಗತಿಕರ ಹಸಿವು ನೀಗಿಸುತ್ತಿರುವ ಹುಬ್ಬಳ್ಳಿಯ ಬಟ್ಟೆ ವ್ಯಾಪಾರಿ - ಹುಬ್ಬಳ್ಳಿ ಲೇಟೆಸ್ಟ್ ನ್ಯೂಸ್
🎬 Watch Now: Feature Video
ಹುಬ್ಬಳ್ಳಿ: ಕೋವಿಡ್ ಹರಡುವಿಕೆ ತಡೆಗೆ ಕೊರೊನಾ ಕರ್ಫ್ಯೂ ವಿಧಿಸಿರುವುದರಿಂದ ಬಡ ವರ್ಗದ ಜನರಿಗೆ ಸಾಕಷ್ಟು ತೊಂದರೆ ಉಂಟಾಗಿದೆ. ಈ ಮಧ್ಯೆ ಹುಬ್ಬಳ್ಳಿಯ ಬಟ್ಟೆ ವ್ಯಾಪಾರಿ ಭರತ್ ಎಂಬುವವರು ನಿರ್ಗತಿಕರ ಹಸಿವು ನೀಗಿಸುವ ಕೆಲಸ ಮಾಡುತ್ತಿದ್ದಾರೆ. ತಮ್ಮ ಮನೆಯಲ್ಲಿ ಬಡತನವಿದ್ದರೂ ತಾನು ಉಳಿಸಿದ ಅಲ್ಪಸ್ವಲ್ಪ ಹಣದಲ್ಲೇ ನಿರ್ಗತಿಕರಿಗೆ ಬಿಸ್ಕಟ್, ಚಪಾತಿ, ರೊಟ್ಟಿ, ಬನ್ ಹಾಗೂ ಕುಡಿಯುವ ನೀರು ವಿತರಣೆ ಮಾಡುವ ಮೂಲಕ ಮಾನವೀಯತೆ ಮರೆಯುತ್ತಿದ್ದಾರೆ. ಇದರ ಜೊತೆಗೆ ಬೀದಿ ನಾಯಿಗಳಿಗೂ ಬಿಸ್ಕಟ್, ನೀರು ಹಾಕುತ್ತಿದ್ದಾರೆ. ಇವರ ಈ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.