ಮ್ಯಾಗಿ ಮಾಡಲು ಹೋದ ಬಾಲಕ ಅನಿಲ ದುರಂತಕ್ಕೆ ಬಲಿ..! - A 7year boy dead in tumkur

🎬 Watch Now: Feature Video

thumbnail

By

Published : Oct 14, 2019, 10:49 PM IST

Updated : Oct 16, 2019, 1:26 PM IST

ತುಮಕೂರು: ಮ್ಯಾಗಿ ಮಾಡಲು ಗ್ಯಾಸ್ ಹಚ್ಚಲು ಹೋಗಿ ಅನಿಲ ಸೋರಿಕೆಯಾಗಿರುವ ಪರಿಣಾಮ ಬೆಂಕಿ ತಗುಲಿ ಬಾಲಕನೋರ್ವ ಮೃತಪಟ್ಟಿರುವ ಘಟನೆ ನಗರದ ಕ್ರಿಶ್ಚಿಯನ್​ ಕಾಲೋನಿಯಲ್ಲಿ ನಡೆದಿದೆ. 7 ವರ್ಷದ ನೋಯಲ್​ ಪ್ರಸಾದ್ ತಾನೇ ಮ್ಯಾಗಿ ಮಾಡಲು ಮುಂದಾಗಿದ್ದಾನೆ. ಅಡುಗೆ ಮನೆಗೆ ಹೋಗಿ ಗ್ಯಾಸ್​ ಆನ್​ ಮಾಡಿದ್ದಾನೆ. ಆದರೆ, ಲೈಟರ್​ನಲ್ಲಿ ಬೆಂಕಿ ಹಚ್ಚಲು ತಡ ಮಾಡಿದ ಕಾರಣ ಹೆಚ್ಚು ಗ್ಯಾಸ್​ ಸೋರಿಕೆಯಾಗಿದ್ದು, ಏಕಾಏಕಿ ಜೋರಾಗಿ ಬೆಂಕಿ ಹೊತ್ತಿಕೊಂಡು ಬಾಲಕ ತೀವ್ರವಾಗಿ ಗಾಯಗೊಂಡಿದ್ದನು. ತಕ್ಷಣವೇ ಆತನನ್ನು ಸ್ಥಳೀಯ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
Last Updated : Oct 16, 2019, 1:26 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.