ಡಾ.ವೀರೇಂದ್ರ ಹೆಗ್ಗಡೆ ಅವರ 71ನೇ ಜನ್ಮದಿನಾಚರಣೆ: ಧಾರವಾಡದಲ್ಲಿ ಚಾರಿಟಿ ವಾಕ್ - ಧಾರವಾಡದಲ್ಲಿ ಚಾರಿಟಿ ವಾಕ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5160888-thumbnail-3x2-darwad.jpg)
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರ 71ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಇಂದು ಧಾರವಾಡದಲ್ಲಿ ಎಸ್ಡಿಎಂ ಮೆಡಿಕಲ್ ಕಾಲೇಜಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಸಹಯೋಗದಲ್ಲಿ ಚಾರಿಟಿ ನಡಿಗೆ ಹಮ್ಮಿಕೊಳ್ಳಲಾಗಿತ್ತು. ಭೂಮಿ ಉಳಿಸಿ, ನಿಸರ್ಗ ಬೆಳೆಸಿ ಎನ್ನುವ ಅಭಿಯಾನದ ಈ ನಡಿಗೆಗೆ ಕಲಾಭವನದಲ್ಲಿ ಗಿಡ ನೆಡುವ ಮೂಲಕ ಎಸ್ಡಿಎಂ ಮೆಡಿಕಲ್ ಕಾಲೇಜಿನ ಎಂ.ಡಿ. ನಿರಂಜನ್ಕುಮಾರ್ ಚಾಲನೆ ನೀಡಿದರು. ಚಾರಿಟಿ ವಾಕ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರೂ ತಮ್ಮ ನಡಿಗೆಯಿಂದ ಬಂದಂತಹ ಹಣವನ್ನು ಬಡ ರೋಗಿಗಳಿಗೆ ನೀಡಲು ಮುಂದಾಗಿದ್ದಾರೆ. ಕಲಾಭವನದಿಂದ ಪ್ರಾರಂಭವಾದ ನಡಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸತ್ತೂರಿನ ಎಸ್ಡಿಎಂ ಕಾಲೇಜಿನವರೆಗೂ ಸುಮಾರು 5 ಕಿ.ಮೀ ನಡೆಯಿತು.