ಸಿದ್ದಗಂಗಾ ಮಠದಲ್ಲಿ ಐದನೇ ದಿನದ ಜಾತ್ರಾ ಮಹೋತ್ಸವದ ವೈಭವ…! - ತುಮಕೂರು ಜಾತ್ರೆ ಲೆಟೆಸ್ಟ್ ನ್ಯೂಸ್
🎬 Watch Now: Feature Video
ತುಮಕೂರಿನ ಸಿದ್ದಗಂಗಾ ಮಠದಲ್ಲಿ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಐದನೇ ದಿನವೂ ಜಾತ್ರೆ ವೈಭವದಿಂದ ಜರುಗಿತು. ಶನಿವಾರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಮಹೋತ್ಸವದಲ್ಲಿ ಪಾಲ್ಗೊಂಡಿದ್ದು, ಪೂರ್ವ ನಿಗದಿಯಂತೆ ಶ್ರೀ ಗೋಸಲ ಸಿದ್ದೇಶ್ವರಸ್ವಾಮಿ ಉತ್ಸವಕ್ಕೆ ಶ್ರದ್ಧಾಭಕ್ತಿಯಿಂದ ಚಾಲನೆ ನೀಡಲಾಯಿತು. ಮಠದ ಆವರಣದಲ್ಲಿಯೇ ನಡೆದ ಉತ್ಸವದಲ್ಲಿ ಮಕ್ಕಳ ನಂದಿಧ್ವಜ ಕುಣಿತ ಗಮನಸೆಳೆಯಿತು. ವಿವಿಧ ಕಲಾ ತಂಡಗಳು ಉತ್ಸವದಲ್ಲಿ ಪಾಲ್ಗೊಂಡಿದ್ದವು. ಮಹಿಳೆಯರು ಫಲ-ಪುಷ್ಪ ಹಾಗೂ ಕಳಸದೊಂದಿಗೆ ರಥೋತ್ಸವದ ಮುಂಭಾಗದಲ್ಲಿ ಹೆಜ್ಜೆ ಹಾಕಿದರು. ವಿವಿಧ ಮಠಾಧೀಶರು ಉತ್ಸವದಲ್ಲಿ ಪಾಲ್ಗೊಂಡಿದ್ದರು.