ದಾವಣಗೆರೆಯಲ್ಲಿ ಎರಡನೇ ಹಂತದ ಮತದಾನ : ಮತದಾರರ ಪಟ್ಟಿ ಅದಲು-ಬದಲಾಗಿ ಗೊಂದಲ - ಗ್ರಾಪಂ ಚುನಾವಣಾ ಮತದಾರರ ಪಟ್ಟಿಯಲ್ಲಿ ವ್ಯತ್ಯಾಸ ಸುದ್ದಿ
🎬 Watch Now: Feature Video
ದಾವಣಗೆರೆ ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್ ಚುನಾವಣೆಗೆ 2ನೇ ಹಂತದ ಮತದಾನ ನಡೆಯುತ್ತಿದೆ. ಹರಿಹರ, ಚನ್ನಗಿರಿ, ನ್ಯಾಮತಿ ತಾಲೂಕುಗಳ 101 ಗ್ರಾಪಂಗಳ ಪೈಕಿ, 1112 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಆದ್ರೆ, ಮತದಾರರ ಪಟ್ಟಿ ಅದಲು ಬದಲಾಗಿದ್ದರಿಂದ ಹರಿಹರ ತಾಲೂಕಿನ ಮಿಟ್ಲಕಟ್ಟೆ ಗ್ರಾಮದಲ್ಲಿ ಗಲಾಟೆ ನಡೆದಿದ್ದು, ಕೆಲಕಾಲ ಗೊಂದಲ ಮನೆ ಮಾಡಿತ್ತು. ನಂತರ ಬೆಳಗ್ಗೆ ಏಳು ಗಂಟೆಗೆ ಮತದಾನದ ಪ್ರಕ್ರಿಯೆ ಆರಂಭವಾಗಿದ್ದು, ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದರು. ಈ ಬಗ್ಗೆ ಈಟಿವಿ ಭಾರತ ಪ್ರತಿನಿಧಿ ಪ್ರತ್ಯಕ್ಷ ವರದಿ ಮಾಡಿದ್ದಾರೆ.