ಹಳೆಯ ವಸ್ತು ಬಳಸಿ ಎಲೆಕ್ಟ್ರಿಕಲ್ ಸೈಕಲ್ ತಯಾರಿ: 15ರ ಬಾಲಕನ ಕಮಾಲ್ - ಬ್ಯಾಟರಿ ಚಾಲಿತ ಸೈಕಲ್
🎬 Watch Now: Feature Video
ಕೊಪ್ಪಳ ನಗರದ ಬಾಳೇಶ ವಿಶ್ವನಾಥ ಹಿರೇಮಠ ಎಂಬ ಬಾಲಕ ಗುಜರಿ ವಸ್ತುಗಳನ್ನು ಬಳಸಿ ಈ ಸೈಕಲ್ ತಯಾರಿಸಿದ್ದಾನೆ. ನಗರದ ಶ್ರೀ ಶಿವಶಾಂತವೀರ ಪಬ್ಲಿಕ್ ಸ್ಕೂಲ್ನಲ್ಲಿ 8ನೇ ತರಗತಿ ಅಭ್ಯಾಸ ಮಾಡುತ್ತಿರುವ ಈತ ಸುಮಾರು 8-9 ಸಾವಿರ ರೂಪಾಯಿ ಖರ್ಚು ಮಾಡಿ ಲ್ಯಾಪ್ಟಾಪ್ ಬ್ಯಾಟರಿಗಳು ಹಾಗೂ ಇನ್ನಿತರೆ ಗುಜರಿ ವಸ್ತುಗಳನ್ನು ಬಳಸಿಕೊಂಡು ತನ್ನದೇ ಮಾಡೆಲ್ನ ಎಲೆಕ್ಟ್ರಿಕಲ್ ಬೈಸಿಕಲ್ ರೆಡಿ ಮಾಡಿದ್ದು ಜನರು ಹುಬ್ಬೇರುವಂತೆ ಮಾಡಿದ್ದಾನೆ.