ಕಾಫಿ ತೋಟದಲ್ಲಿ ಅಡಗಿದ್ದ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ!! - 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ
🎬 Watch Now: Feature Video
ಮೂಡಿಗೆರೆ ತಾಲೂಕಿನ ಪಟದೂರು ಗ್ರಾಮದ ಉದಯ್ ಎಂಬುವರ ಕಾಫಿ ತೋಟದಲ್ಲಿ ಸುಮಾರು 15 ಅಡಿ ಬೃಹತ್ ಗಾತ್ರದ ಕಾಳಿಂಗ ಸರ್ಪ ಪತ್ತೆಯಾಗಿದೆ. ಕೂಡಲೇ ತೋಟದ ಮಾಲೀಕ ಉದಯ್ ಅವರು ಉರಗ ತಜ್ಞ ಮೊಹ್ಮದ್ ಅವರಿಗೆ ವಿಚಾರ ತಿಳಿಸಿದ್ದಾರೆ. ಕಾಫಿ ತೋಟದ ಮಧ್ಯೆ ಅವಿತು ಕುಳಿತಿದ್ದ ಈ ಕಾಳಿಂಗವನ್ನು ಸೆರೆ ಹಿಡಿದು,ಸುರಕ್ಷಿತವಾಗಿ ಸ್ಥಳೀಯ ಅರಣ್ಯ ಪ್ರದೇಶಕ್ಕೆ ಈ ಕಾಳಿಂಗ ಸರ್ಪವನ್ನು ಮೊಹ್ಮದ್ ಬಿಟ್ಟಿದ್ದಾರೆ.