ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡುತ್ತಿರುವ ಸಂಭ್ರಮದಲ್ಲಿ ಎಲಿಸ್ ಪೆರ್ರಿ: ವಿಡಿಯೋ - ವಿಶ್ವಕಪ್ ಬಗ್ಗೆ ಎಲಿಸ್ ಪೆರ್ರಿ ಮಾತು
🎬 Watch Now: Feature Video
ಕ್ರೈಸ್ಟ್ಚರ್ಚ್: ಆಸ್ಟ್ರೇಲಿಯಾದ ಸ್ಟಾರ್ ಕ್ರಿಕೆಟರ್ ಎಲಿಸ್ ಪೆರ್ರಿ ಗಾಯದಿಂದ ಚೇತರಿಸಿಕೊಂಡಿದ್ದು, ಒಂದು ವರ್ಷದ ನಂತರ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡಲಿದ್ದಾರೆ. ಅವರು 2019ರ ಮಹಿಳೆಯರ ಟಿ20 ವಿಶ್ವಕಪ್ ವೇಳೆ ಗಾಯಗೊಂಡಿದ್ದರು. ಮಧ್ಯೆ ಬಿಬಿಎಸ್ ವೇಳೆ ತಂಡ ಸೇರಿಕೊಂಡಿದ್ದರಾದರೂ ಕೆಲವೇ ಪಂದ್ಯಗಳಲ್ಲಿ ಮತ್ತೆ ಗಾಯಗೊಂಡಿದ್ದರು. ಇದೀಗ ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಸರಣಿಗೆ ಆಸ್ಟ್ರೇಲಿಯಾ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ್ದು, ಹ್ಯಾಮ್ಸ್ಟ್ರಿಂಗ್ ನಿಂದ ಚೇತರಿಸಿಕೊಂಡಿದ್ದು, ತಾವೂ ಸಂಪೂರ್ಣ ಫಿಟ್ನೆಸ್ ಹೊಂದಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡಲು ಕಾಯುತ್ತಿರುವುದಾಗಿ ತಿಳಿಸಿದ್ದಾರೆ. ಜೊತೆಗೆ ಮುಂಬರುವ ವಿಶ್ವಕಪ್ ಸೇರಿದಂತೆ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ.