ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಯುವಿಗೆ ಮರು ಸವಾಲೆಸೆದ ಸಚಿನ್​... ಕೊನೆಗೆ ಟ್ವಿಸ್ಟ್​ ಕೊಟ್ಟ ಕ್ರಿಕೆಟ್​ ದೇವರು! - ಬ್ಯಾಟ್​ ಮೇಲೆ ಬಾಲ್​ ಬೌನ್ಸ್

🎬 Watch Now: Feature Video

thumbnail

By

Published : May 17, 2020, 8:28 AM IST

ಕೆಲ ದಿನಗಳ ಹಿಂದಷ್ಟೇ ಭಾರತದ ಮಾಜಿ ಕ್ರಿಕೆಟರ್​ ಯುವರಾಜ್​ ಸಿಂಗ್​ ಬ್ಯಾಟ್ ಗೋಡಿಯಾಗಿಟ್ಟುಕೊಂಡು ಬಾಲ್​ ಬೌನ್ಸ್​ ಮಾಡುತ್ತಾ ಕೋವಿಡ್​-19 ಬಿಕ್ಕಟ್ಟು ಮುಗಿಯುವವರೆಗೂ ಎಲ್ಲರೂ ಮನೆಯಲ್ಲಿ ಸೇಫ್​ ಆಗಿರಿ ಎಂದು ಮನವಿ ಮಾಡಿ, ಬಾಲ್​ ಬ್ಯಾಲೆನ್ಸ್​ ಮಾಡುವಂತೆ ಸಚಿನ್​ ತೆಂಡೂಲ್ಕರ್​ , ರೋಹಿತ್​ ಶರ್ಮಾ ಹಾಗೂ ಹರ್ಭಜನ್​ ಸಿಂಗ್​ಗೆ ಟ್ವೀಟರ್​ನಲ್ಲಿ ಸವಾಲು ಹಾಕಿದ್ದರು. ಇದೀಗ ಸವಾಲು ಸ್ವೀಕರಿಸಿರುವ ಭಾರತ ಕ್ರಿಕೆಟ್​ ತಂಡದ ಲೆಜೆಂಡ್ ಸಚಿನ್​ ತೆಂಡೂಲ್ಕರ್​, ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಬ್ಯಾಟ್​ ಮೇಲೆ ಬಾಲ್​ ಬೌನ್ಸ್​ ಮಾಡಿ, ಯುವಿಗೆ, ಈ ರೀತಿ ಮಾಡುವಂತೆ ಮರುಸವಾಲು ಹಾಕಿ ಟ್ವೀಟ್​ ಮಾಡಿದ್ದಾರೆ. ಆದರೆ ಟ್ವಿಸ್ಟ್​ ಒಂದನ್ನು ನೀಡಿರುವ ಸಚಿನ್​, ವಿಡಿಯೋ ಕೊನೆಯಲ್ಲಿ ಕಣ್ಣಿಗೆ ಕಟ್ಟಿದ್ದ ಬಟ್ಟೆ ತೆಗೆದು ಅದು ಟ್ರಾನ್ಸ್‌ಫರೆಂಟ್ ಎಂಬುದನ್ನು ತೋರಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.