ಭಾರತ vs ದಕ್ಷಿಣ ಆಫ್ರಿಕಾ: ಮೊದಲ ಏಕದಿನ ಪಂದ್ಯಕ್ಕೆ ನೆಟ್ನಲ್ಲಿ ಬೆವರು ಹರಿಸುತ್ತಿರುವ ಬ್ಲೂ ಬಾಯ್ಸ್! - Men in Blue' were seen brushing up their skills ahead of the first match
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6365065-thumbnail-3x2-cricket.jpg)
ಧರ್ಮಶಾಲಾ (ಹಿಮಾಚಲಪ್ರದೇಶ): ದಕ್ಷಿಣ ಆಫ್ರಿಕಾ ವಿರುದ್ಧ ಮಾರ್ಚ್ 12ರಿಂದ ಆರಂಭವಾಗಲಿರುವ ಮೂರು ಏಕದಿನ ಪಂದ್ಯಗಳ ಸರಣಿಗೆ ಭಾರತ ತಂಡದ ಆಟಗಾರರು ನೆಟ್ ಪ್ರಾಕ್ಟೀಸ್ನಲ್ಲಿ ಬೆವರು ಸುರಿಸುತ್ತಿದ್ದಾರೆ. ನ್ಯೂಜಿಲ್ಯಾಂಡ್ ಪ್ರವಾಸದಲ್ಲಿ ಏಕದಿನ ಮತ್ತು ಟೆಸ್ಟ್ ಸರಣಿಗಳಲ್ಲಿ ಹೀನಾಯವಾಗಿ ಸೋತು ತವರಿಗೆ ಮರಳಿರುವ ಭಾರತ ತಂಡ, ಈ ಸರಣಿ ಗೆದ್ದು ಈಗಾಗಿರುವ ಅವಮಾನವನ್ನು ಸರಿದೂಗಿಸಲು ಎಲ್ಲಾ ರೀತಿಯ ಸಿದ್ಧತೆ ನಡೆಸುತ್ತಿದೆ. ನಾಳೆ ಹಿಮಾಚಲಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ ನಡೆಯಲಿದೆ.