ಅಶ್ವಾರೋಹಣ ವಿಶ್ವಕಪ್... ಮತ್ತೆ ವರ್ಲ್ಡ್ ಕಪ್ ಗೆದ್ದ ಚಾಂಪಿಯನ್! - ಗೆದ್ದ ಹಾಲಿ ಚಾಂಪಿಯನ್
🎬 Watch Now: Feature Video
ಸಂಗೀತಕ್ಕೆ ತಕ್ಕಂತೆ ಕುದುರೆ ಪಳಗಿಸುವ ಆಟದಲ್ಲಿ ಮತ್ತೆ ವರ್ಲ್ಡ್ ಕಪ್ ಕಿರೀಟವನ್ನು ಮುಡಿದಿದ್ದಾರೆ ಜರ್ಮನಿಯ ಆಟಗಾರ್ತಿ. ಶನಿವಾರ ಸ್ವೀಡನ್ನ ಗೋಥೆನ್ಬರ್ಗ್ನಲ್ಲಿ ನಡೆದ ವರ್ಲ್ಡ್ಕಪ್ ಡ್ರೆಸ್ಟೇಜ್ ಫ್ರೀಸ್ಟೈಲ್ ಫೈನಲ್ ಪಂದ್ಯದಲ್ಲಿ ಹಾಲಿ ಎಫ್ಇಐ ವಿಶ್ವಕಪ್ ಚಾಂಪಿಯನ್ ಇಸಾಬೆಲ್ ವೆರ್ಥ್ ಗೆಲುವು ದಾಖಲಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಇಸಾಬೆಲ್ ವೆರ್ಥ್ 88.871 ಅಂಕಗಳನ್ನು ಗಳಿಸಿ ಮೊದಲನೇ ಸ್ಥಾನವನ್ನು ಪಡೆದಿದ್ದರು. ವಿಶ್ವ ನಂ.2 ಅಮೆರಿಕ ಆಟಗಾರ್ತಿ ಲೌರಾ ಗ್ರೇವ್ಸ್ 87.179 ಅಂಕಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟರು. ಇನ್ನು 86.571 ಅಂಕಗಳನ್ನು ಕಲೆ ಹಾಕಿ ಮೂರನೇ ಸ್ಥಾನ ಅಲಂಕರಿಸಿದ್ದಾರೆ ಜರ್ಮನಿಯ ಹೆಲೆನ್ ಲ್ಯಾಂಗ್ಹನೆನ್ಬರ್ಗ್.