ವಿರಾಟ್ನಿಂದ ಆಟೋಗ್ರಾಫ್ ಅಲ್ಲ, ಕೊಹ್ಲಿಗೆ ಆಟೋಗ್ರಾಫ್ ನೀಡಿದ 7 ವರ್ಷದ ಪೋರ! - 7 ವರ್ಷದ ಬಾಲಕ
🎬 Watch Now: Feature Video
ಜಮೈಕಾ: ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಆಟೋಗ್ರಾಫ್ ಪಡೆದುಕೊಳ್ಳಲು ಎಲ್ಲರು ಮುಗಿಬಿದ್ದು, ಅವರಿಂದ ಆಟೋಗ್ರಾಫ್ ಪಡೆದುಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಪುಟ್ಟ ಪೋರ ವಿರಾಟ್ ಕೊಹ್ಲಿಗೆ ಆಟೋಗ್ರಾಫ್ ನೀಡಿ ಎಲ್ಲರ ಗಮನ ಸೆಳೆದಿದ್ದಾನೆ. ವೆಸ್ಟ್ ಇಂಡೀಸ್ ವಿರುದ್ಧ ನಡೆದ ಟಿ-20,ಏಕದಿನ ಹಾಗೂ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಗೆಲುವು ದಾಖಲು ಮಾಡಿದ ಬಳಿಕ ವಾಪಸ್ ತವರಿಗೆ ಬರುತ್ತಿದ್ದ ವೇಳೆ ಅವರ ಆಟೋಗ್ರಾಫ್ ಪಡೆದುಕೊಳ್ಳಲು ಮಕ್ಕಳು ಸುತ್ತುವರೆದಿದ್ದಾರೆ. ಈ ವೇಳೆ 7 ವರ್ಷದ ಬಾಲಕನೋರ್ವ ತಾನೇ ಸಹಿ ಮಾಡಿದ ಆಟೋಗ್ರಾಪ್ ಕೊಹ್ಲಿ ಕೈಗಿಟ್ಟಿದ್ದಾನೆ. ಇದೀಗ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.