ಕಳೆದ ವರ್ಷದ ನೆನಪುಗಳನ್ನ ಮೆಲುಕು ಹಾಕಿದ ಸತೀಶ್ ನೀನಾಸಂ!- ವಿಡಿಯೋ - ಪೆಟ್ರೋಮ್ಯಾಕ್ಸ್ ಸಿನಿಮಾದ ಶೂಟಿಂಗ್
🎬 Watch Now: Feature Video
ಬೆಂಗಳೂರು: ಸತೀಶ್ ನೀನಾಸಂ ಸದ್ಯ ಕನ್ನಡ ಚಿತ್ರರಂಗದಲ್ಲಿ ತನ್ನದೇ ಸ್ಟಾರ್ ವ್ಯಾಲ್ಯೂ ಹೊಂದಿರುವ ನಟ. ಪೆಟ್ರೋಮ್ಯಾಕ್ಸ್ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿಯಲ್ಲಿರೋ ಸತೀಶ್ ನೀನಾಸಂ ಮೈಸೂರಿನಲ್ಲಿ, ಈ ಚಿತ್ರದ ಚಿತ್ರೀಕರಣ ನಡೆಸುತ್ತಿದ್ದಾರೆ. ಸತೀಶ್ ಜೊತೆ ಹರಿಪ್ರಿಯಾ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡುತ್ತಿರುವ ಸಿನಿಮಾಕ್ಕೆ, ಸಿದ್ಲಿಂಗು, ನೀರ್ ದೋಸೆ ಚಿತ್ರಗಳ ಖ್ಯಾತಿಯ ವಿಜಯ್ ಪ್ರಸಾದ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರತಂಡ ಕೊನೆಯ ಹಂತದ ಚಿತ್ರೀಕರಣವನ್ನ ಮೈಸೂರಿನಲ್ಲಿ ಮುಗಿಸಿದೆ. ಸತೀಶ್ಈ ನೀನಾಸಂ ಹೊಸ ವರ್ಷವನ್ನ ವಿಭಿನ್ನವಾಗಿ ಬರಮಾಡಿಕೊಂಡಿದ್ದಾರೆ. ಕಳೆದ ವರ್ಷ ನಡೆದ ಕಹಿ ಘಟನೆಗಳನ್ನ ಮೆಲುಕು ಹಾಕುತ್ತಾ ನಾವೆಲ್ಲರೂ ಈ ಹೊಸ ವರ್ಷದಲ್ಲಿ ಏನೆಲ್ಲ ಕೆಲಸಗಳನ್ನ ಮಾಡಬೇಕು ಅನ್ನೋದನ್ನ ತಮ್ಮ ಪದಗಳ ಮೂಲಕ ವರ್ಣಿಸಿದ್ದಾರೆ. ಸೈಕಲ್ ತುಳಿಯುತ್ತಾ, ಯೋಚನೆ ಮಾಡುತ್ತಾ, ಸಮುದ್ರದ ತೀರದಲ್ಲಿ ಹೆಜ್ಜೆ ಹಾಕುತ್ತಾ ಅವರು 2021ನೇ ವರ್ಷವನ್ನ ವಿಭಿನ್ನವಾಗಿ ಬರಮಾಡಿಕೊಂಡಿರೋದು ವಿಶೇಷ.