ದೀಪ ಬೆಳಗಿಸಿ ಮೋದಿ ಕರೆಗೆ ಜೈ ಎಂದ ಚಂದನವನದ ತಾರೆಯರು.. - ದೀಪ ಬೆಳಗಿಸಿದ ಸೆಲೆಬ್ರೆಟಿಗಳು
🎬 Watch Now: Feature Video
ಮನೆಯಲ್ಲಿ ಲೈಟುಗಳನ್ನು ಆಫ್ ಮಾಡಿ ದೀಪ ಹಚ್ಚುವ ಮೂಲಕ ಕೊರೊನಾ ವಿರುದ್ಧ ಹೋರಾಡಲು ನಾವು ಒಗ್ಗಟ್ಟಾಗಿದ್ದೇವೆ ಎಂಬುದನ್ನು ಪ್ರದರ್ಶಿಸಿ ಎಂದು ಪ್ರಧಾನಿ ಮೋದಿ ನೀಡಿದ್ದ ಕರೆಗೆ ಸ್ಯಾಂಡಲ್ವುಡ್ ಕೂಡ ಜೈ ಅಂದಿದೆ. ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ನಟ-ನಟಿಯರು ಮನೆಯಲ್ಲಿ ಲೈಟ್ ಆಫ್ ಮಾಡಿ ದೀಪಗಳನ್ನು ಹಚ್ಚುವ ಮೂಲಕ ದೇಶದ ಜನತೆ ನಿಮ್ಮೊಂದಿಗೆ ಇದ್ದಾರೆ ಎಂಬ ಸಂದೇಶವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಲುಪಿಸಿದ್ದಾರೆ. ವಿಶೇಷವಾಗಿ ಹಿರಿಯ ನಟಿ ಲೀಲಾವತಿ ಕೂಡ ನೆಲಮಂಗಲದ ಫಾರ್ಮ್‌ಹೌಸ್‌ನಲ್ಲಿ ದೀಪ ಹಚ್ಚುವ ಮೂಲಕ ಮೋದಿಗೆ ಸಾಥ್ ನೀಡಿದ್ದಾರೆ.