ಲಾಕ್ ಡೌನ್ ಮುಗಿದ ನಂತರ ಬಿಡುಗಡೆಯಾಗುವ ಮೊದಲ ಸಿನಿಮಾ ಇದು..! - Salaga movie will release after lock down
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6608723-637-6608723-1585654788977.jpg)
ದೇಶದಲ್ಲಿ ಕೊರೊನಾ ಭೀತಿ ಉಂಟಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಲಾಕ್ ಡೌನ್ ಆದೇಶ ನೀಡಿದರು. ಈ ವೇಳೆ ಸಿನಿಮಾ ಚಿತ್ರೀಕರಣ ಕೂಡಾ ಬಂದ್ ಆಯ್ತು. ಸೆಲಬ್ರಿಟಿಗಳು, ಜನಸಾಮಾನ್ಯರು ಮನೆಯಲ್ಲೇ ಉಳಿದುಕೊಂಡರು. ಥಿಯೇಟರ್ ಕೂಡಾ ಬಂದ್ ಆಗಿದ್ದು ಜನರು ಎಷ್ಟು ಬೇಗ ಲಾಕ್ ಡೌನ್ ಮುಗಿಯುವುದೋ ಎಂದು ಕಾಯುತ್ತಿದ್ದಾರೆ. ಈ ನಡುವೆ ಲಾಕ್ ಡೌನ್ ಮುಗಿಯುತ್ತಿದ್ದಂತೆ ಬಿಡುಗಡೆಯಾಗುವ ಮೊದಲ ಸಿನಿಮಾ ಯಾವುದು ಎಂಬುದರ ಬಗ್ಗೆ ಜನರಿಗೆ ಕುತೂಹಲ ಇದ್ದೇ ಇದೆ. ದುನಿಯಾ ವಿಜಯ್ ಅಭಿನಯದ ಸಿನಿಮಾ ಏಪ್ರಿಲ್ 14 ರ ನಂತರ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ.