ಯುವರತ್ನನ ಸರ್ಪ್ರೈಸ್ ಎಂಟ್ರಿಗೆ ಥ್ರಿಲ್ ಆದ ಅಭಿಮಾನಿಗಳು! - ಪುನೀತ್ ರಾಜ್ಕುಮಾರ್ ಹುಟ್ಟು ಹಬ್ಬ
🎬 Watch Now: Feature Video
ಕನ್ನಡ ಚಿತ್ರರಂಗದಲ್ಲಿ ದೊಡ್ಮನೆ ರಾಜಕುಮಾರನಾಗಿ ಬೆಳ್ಳಿ ತೆರೆ ಮೇಲೆ ರಾರಾಜಿಸುತ್ತಿರುವ ನಟ ಪುನೀತ್ ರಾಜ್ಕುಮಾರ್ 46ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅದೆಷ್ಟೋ ಸಿನಿಮಾಸಕ್ತರು ಪುನೀತ್ ಅವರನ್ನ ಮೀಟ್ ಮಾಡ್ಬೇಕು ಅಂತಾ ಕಾಯ್ತಾ ಇರೋದಂತು ಸತ್ಯ. ಅಂತಹ ಅಭಿಮಾನಿಗಳನ್ನೇ ಹುಡುಕಿ, ನಿಮಗೆ ಅಪ್ಪು ಸಿನಿಮಾನೇ ಯಾಕೆ ಇಷ್ಟ ಆಗುತ್ತೆ? ಪವರ್ ಸ್ಟಾರ್ ಯಾಕೆ ಇಷ್ಟ ಆಗ್ತಾರೆ? ಎಂಬ ನೇರ ಪ್ರಶ್ನೆಗಳನ್ನು ಕೇಳಿದಾಗ, ಅಷ್ಟೇ ಸುಂದರವಾಗಿ ಸಾಕಷ್ಟು ಅಭಿಮಾನಿಗಳು ತಮ್ಮ ಮನದಾಳದ ಮಾತುಗಳನ್ನು ಹೇಳಿದ್ದಾರೆ. ಹೀಗೆ ತಮ್ಮಿಷ್ಟದ ಅಪ್ಪುವಿನ ಸಾಹಸಮಯ ಚಲನಚಿತ್ರಗಳು, ಅವರ ವ್ಯಕ್ತಿತ್ವವನ್ನ ಹಾಡಿ ಹೊಗಳುವಾಗ ಸ್ವತಃ ಪುನೀತ್ ಅವರೇ ಮುಂದೆ ಬಂದು ಶಾಕ್ ನೀಡಿದ್ದಾರೆ.