'ಪಾಪ್ ಕಾರ್ನ್ ಮಂಕಿ ಟೈಗರ್'​ಗೆ ಡಾಲಿ ಧನಂಜಯ್ ಖಡಕ್​ ಡೈಲಾಗ್..

By

Published : Nov 16, 2019, 9:41 PM IST

thumbnail
'ಟಗರು' ಸಿನಿಮಾದ ಬಳಿಕ ನಿರ್ದೇಶಕ ದೂನಿಯಾ ಸೂರಿ ಹಾಗೂ ಡಾಲಿ ಧನಂಜಯ್ ಕಾಂಬಿನೇಷನ್​​ನಲ್ಲಿ ಮೂಡಿ ಬರುತ್ತಿರುವ ಬಹುನಿರೀಕ್ಷಿತ ಚಿತ್ರ ಪಾಪ್ ಕಾರ್ನ್ ಮಂಕಿ ಟೈಗರ್​ ಬಿಡುಗಡೆಗೆ ಸಜ್ಜಾಗುತ್ತಿದೆ. ಆಕಾಶ್​ ಆಡಿಯೋದಲ್ಲಿ ಡಬ್ಬಿಂಗ್​ ಕೆಲಸ ಮುಗಿಸಿದ್ದು, ಕೊನೆಯ ದಿನ ಸೆರೆಹಿಡಿದಿರುವ ಸಣ್ಣ ಡಬ್ಬಿಂಗ್ ವಿಡಿಯೋವನ್ನು ಚಿತ್ರತಂಡ ರಿಲೀಸ್ ಮಾಡಿದೆ. ಇನ್ನು, ಈ ವಿಡಿಯೋದಲ್ಲಿ ಡಾಲಿ ಧನಂಜಯ್​ ಹೇಳಿರುವ ಡೈಲಾಗ್​ಗಳು ಸಖತ್​ ಸೌಂಡ್​ ಮಾಡ್ತಿವೆ. ವಿಶಿಷ್ಟ ಪೋಸ್ಟರ್​ಗಳ ಸ್ಟಾರ್ ಕಾಸ್ಟ್​ನಿಂದ ಸುದ್ದಿ ಮಾಡಿದ್ದ ಚಿತ್ರತಂಡ ಸದ್ಯದ್ರಲ್ಲೇ ಚಿತ್ರದ ಟೀಸರ್ ರಿಲೀಸ್ ಮಾಡುವ ಯೋಜನೆ ಮಾಡಿದೆ. ಈ ಚಿತ್ರಕ್ಕೆ ಕಥೆ, ಸಂಭಾಷಣೆ ಹಾಗೂ ನಿರ್ದೇಶನವನ್ನು ಸುಕ್ಕಾ ಸೂರಿ ಮಾಡಿದ್ದು, ಸುಧೀರ್ ಕೆ.ಎಮ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಶೇಖರ್ ಎಸ್ ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ, ಚರಣ್ ರಾಜ್ ಸಂಗೀತ ಚಿತ್ರಕ್ಕಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.