'ಅತ್ಯಾಚಾರಿಗಳಿಗೆ ಉಗ್ರ ಶಿಕ್ಷೆಯಾಗಬೇಕು': ಕಿಚ್ಚನ ಖಡಕ್ ಮಾತು - ದಬಅಂಗ್ 3 ಪ್ರಚಾರದಲ್ಲಿ ಕಿಚ್ಚ ಸುದೀಪ್
🎬 Watch Now: Feature Video
ಮುಂಬೈ: ಹೈದರಾಬಾದ್ ಪಶುವೈದ್ಯೆ ಅತ್ಯಾಚಾರ ಹಾಗೂ ಬರ್ಬರ ಹತ್ಯೆಯನ್ನು ಕಿಚ್ಚ ಸುದೀಪ್ ಖಂಡಿಸಿದ್ದು, ಇಂತಹ ಘಟನೆಗಳು ಪ್ರತಿ ಹೆತ್ತವರಿಗೂ, ಪ್ರತಿ ಸಹೋದರರಿಗೂ ಹಾಗೂ ಗಂಡಂದಿರಿಗೂ ತುಂಬಾ ನೋವು ತರುತ್ತದೆ. ಆರೋಪಿಗಳಿಗೆ ಶಿಕ್ಷೆ ಖಂಡಿತವಾಗಿಯೂ ಆಗುತ್ತದೆ. ಆದರೆ ಶಿಕ್ಷೆ ಹೇಗಿರಬೇಕೆಂದರೆ ಮುಂದಿನ ದಿನದಲ್ಲಿ ಯಾರೂ ಸಹ ಇಂತಹುದನ್ನು ಯೋಚನೆ ಸಹ ಮಾಡಬಾರದು ಎಂದು ಸುದೀಪ್ ಹೇಳಿದ್ದಾರೆ. ಮುಂಬೈನಲ್ಲಿ ತಮ್ಮ ಹಿಂದಿ ಚಿತ್ರ ದಬಾಂಗ್ -3 ಪ್ರಚಾರದ ವೇಳೆ ಸುದ್ದಿಸಂಸ್ಥೆ ಜೊತೆ ಈ ವಿಚಾರ ಹಂಚಿಕೊಂಡಿದ್ದಾರೆ.