'ಚಮಚಾ'ಕ್ಕಿಂತ ಭಕ್ತರಾಗೋದು ಶ್ರೇಷ್ಟ : ಮೋದಿ ವಿರೋಧಿಗಳಿಗೆ ವಿವೇಕ್ ಮಾತಿನ ಗುದ್ದು - ಭಕ್ತ
🎬 Watch Now: Feature Video
ಬಾಲಿವುಡ್ ನಟ ವಿವೇಕ್ ಒಬೆರಾಯ್ ನವದೆಹಲಿಯಲ್ಲಿ ಡೆಮಾಕ್ರಸಿ ಉತ್ಸವಕ್ಕೆ ಆಗಮಿಸಿದ್ದರು. ಈ ಸಮಾರಂಭದಲ್ಲಿ ತಮ್ಮ 'ಪಿಎಂ ನರೇಂದ್ರ ಮೋದಿ' ಬಯೋಪಿಕ್ ಪ್ರಮೋಷನ್ ಮಾಡಿದ್ರು. ಇದೇ ವೇಳೆ ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಅವರು, ನಮ್ಮನ್ನು ಭಕ್ತ ಅಂತಾ ಕರೆಯುತ್ತಾರೆ. ಆದರೆ, ಚಮಚಾ, ಕಡಚಿ ಆಗೋದಕ್ಕಿಂತ ಭಕ್ತರಾಗೋದು ಶ್ರೇಷ್ಟ, ನಾವೆಲ್ಲರೂ ಕೇವಲ ಭಕ್ತರಲ್ಲ ದೇಶಭಕ್ತರಾಗೋಣ ಎಂದರು. ನಮ್ಮ ಚಿತ್ರ ತಡೆಯಲು ಕೆಲವರು ಅಡ್ಡಗಾಲು ಹಾಕಿದ್ರು. ಸುಪ್ರೀಂ ಕೋರ್ಟ್ನ ವಕೀಲರನ್ನು ಬಳಸಿಕೊಂಡ್ರು. ಆದರೆ, ನಿಮ್ಮೆಲ್ಲರ ಪ್ರೋತ್ಸಾಹ, ಬೆಂಬಲದಿಂದ ಎಲ್ಲ ಅಡೆತಡೆಗಳನ್ನು ಮೀರಿ ಮೋದಿ ಬಯೋಪಿಕ್ ಇದೇ 11 ರಂದು ರಿಲೀಸ್ ಆಗಲಿದೆ. ತಮ್ಮ ಮಾತಿನುದ್ದಕ್ಕೆ ಮೋದಿ ಎದುರಾಳಿಗಳನ್ನು ಕುಟುಕಿದ ವಿವೇಕ್ ಅವರ ಸಂಪೂರ್ಣ ವಿಡಿಯೋ ಇಲ್ಲಿದೆ ನೋಡಿ...