ಸಾಹಸ ಸಿಂಹನ ಮಡದಿ ಭಾರತಿ ಹುಟ್ಟು ಹಬ್ಬಕ್ಕೆ 'ಬಾಳೆ ಬಂಗಾರ'ದ ಗಿಫ್ಟ್ ನೀಡಿದ ಅಳಿಯ 'ಆರ್ಯವರ್ಧನ್'.. - ಅನಿರುದ್ಧ ಬಾಳೆ ಬಂಗಾರ ವಿಡಿಯೋ
🎬 Watch Now: Feature Video
ಇಂದು ಕನ್ನಡ ಚಿತ್ರರಂಗದ ಹಿರಿಯ ನಟಿ ಪದ್ಮಶ್ರೀ ಭಾರತಿ ವಿಷ್ಣುವರ್ಧನ್ ಅವರ ಹುಟ್ಟಿದ ದಿನ. ಪಂಚಭಾಷಾ ಚಿತ್ರಗಳಲ್ಲಿ ದಿಗ್ಗಜ ನಟರೊಂದಿಗೆ ಅಭಿನಯಿಸಿರುವ ಭಾರತಿಯವರು ಹಲವು ಸೂಪರ್ ಹಿಟ್ ಚಿತ್ರಗಳಿಂದ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ಅವರ ಅಳಿಯ, ನಟ ಅನಿರುದ್ಧ ಅವರು ಭಾರತಿಯವರ ಕುರಿತು ಇತರೆ ಹಿರಿಯ ಕಲಾವಿದರ ಅನಿಸಿಕೆ ಹಾಗೂ ಸ್ವತಃ ಭಾರತಿಯವರೊಂದಿಗೆ ಸಂದರ್ಶನ ನಡೆಸಿರುವ 'ಬಾಳೆ ಬಂಗಾರ' ಎಂಬ ಶೀರ್ಷಿಕೆಯ ವಿಶೇಷ ವಿಡಿಯೋವೊಂದನ್ನು ಮಾಡಿದ್ದಾರೆ.. ಬಂಗಾರದಂಥ ಭಾರತಿ ಅವರ ಕುರಿತು ಚಿತ್ರರಂಗದ ಹಿರಿಯ ಜೀವಗಳು ಏನು ಹೇಳಿದ್ದಾರೆ ಅಂತೀರಾ ನೀವೇ ನೋಡಿ..