Watch: ನಕ್ಕು ನಗಿಸುವ ಸಿನಿಮಾ ಕ್ರೇಜ್! 'ಯುವರತ್ನ' ಟಿಕೆಟ್‌ಗಾಗಿ ಅಭಿಮಾನಿಗಳ ಸರ್ಕಸ್! - puneet Yuvarathnaa
🎬 Watch Now: Feature Video
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಯುವರತ್ನ' ತೆರೆಗೆ ಅಪ್ಪಳಿಸಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕರ್ನಾಟಕ, ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ಚಿತ್ರ ನಿನ್ನೆ ಬಿಡುಗಡೆಯಾಗಿದೆ. ಅಪ್ಪು ಅಭಿಮಾನಿಗಳು ಚಿತ್ರಮಂದಿರಗಳತ್ತ ತೆರಳಿ ನೆಚ್ಚಿನ ನಟನ ಸಿನಿಮಾ ಕಣ್ತುಂಬಿಕೊಳ್ಳುತ್ತಿದ್ದಾರೆ. ಇದರ ಮಧ್ಯೆ ಟಿಕೆಟ್ ಪಡೆದುಕೊಳ್ಳಲು ಅಭಿಮಾನಿಗಳ ಹರಸಾಹಸ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಿತ್ರಮಂದಿರದ ಟಿಕೆಟ್ ಕೌಂಟರ್ ಬಳಿಕ ನೂರಾರು ಜನ್ರು ಒಟ್ಟಿಗೆ ಸೇರಿ ಟಿಕೆಟ್ ಪಡೆದುಕೊಳ್ಳಲು ಸರ್ಕಸ್ ಮಾಡುತ್ತಿರುವ ದೃಶ್ಯ ಇಲ್ಲಿದೆ ನೋಡಿ..