ಹುಬ್ಬಳ್ಳಿಯಲ್ಲಿ ಸ್ಮೃತಿ ಇರಾನಿ ರೋಡ್ ಶೋ ವೇಳೆ ದಿಢೀರ್ ಕಾಣಿಸಿಕೊಂಡ 'ಶೆಟ್ಟರ್'! - hubballi
🎬 Watch Now: Feature Video
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಪರ ಕೇಂದ್ರ ಸಚಿವೆ ಸ್ಮೃತಿ ಇರಾನಿ ನಡೆಸುತ್ತಿದ್ದ ರೋಡ ಶೋ ವೇಳೆ ವ್ಯಕ್ತಿಯೋರ್ವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಭಾವಚಿತ್ರ ಹಿಡಿದು ಬಂದ ಘಟನೆ ನಡೆದಿದೆ.
ನಗರದ ಶಿರೂರ ಪಾರ್ಕ್ ತೋಳನಕೆರಿ ಮಾರ್ಗದಲ್ಲಿ ನಡೆಯುತ್ತಿದ್ದ ರೋಡ್ ಶೋ ವೇಳೆ ಜಗದೀಶ್ ಶೆಟ್ಟರ್ ಅಭಿಮಾನಿಯೊಬ್ಬರು ಅವರ ಭಾವಚಿತ್ರವನ್ನು ಹಿಡಿದು ಪ್ರದರ್ಶನ ಮಾಡಿದರು. ಇದರಿಂದ ಬಿಜೆಪಿ ಪಕ್ಷದ ಕಾರ್ಯಕರ್ತರು ವಿಚಲಿತಗೊಂಡರು. ಮೊದ ಮೊದಲು ಭಾವ ಚಿತ್ರದ ಮೇಲೆ ನೀರು ಸುರಿಯುವ ಯತ್ನಿಸಿದರು. ಆಗ ಯುವಕ ಬಗ್ಗದಿದ್ದಾಗ ಮತ್ತಷ್ಟು ಕಾರ್ಯಕರ್ತರು ಜಮಾಯಿಸಿ ಯುವಕನ ಕೈಯಲ್ಲಿದ್ದ ಜಗದೀಶ್ ಶೆಟ್ಟರ್ ಭಾವಚಿತ್ರವನ್ನು ಕಸಿದು ಹರಿದು ಹಾಕಿದರು. ಇದೇ ಸಮಯಕ್ಕೆ ಪೊಲೀಸ್ ಅಧಿಕಾರಿಗಳು ಸ್ಥಳ್ಕಕೆ ಆಗಮಿಸಿ ಯುವಕನನ್ನು ಕಾರ್ಯಕರ್ತರಿಂದ ದೂರ ಕರೆದುಕೊಂಡು ಹೋದರು. ಇದರಿಂದ ಬಿಜೆಪಿ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರುಗಳಿಗೆ ಗೊಂದಲ ಉಂಟಾಗಿತ್ತು.
ಇದನ್ನೂ ಓದಿ : ಇನ್ನೆರಡು ಮೂರು ದಿನಗಳಲ್ಲಿ ರಾಜ್ಯದ ಚುನಾವಣೆ ಚಿತ್ರಣ ಬದಲಾಗಲಿದೆ: ಬಿಎಸ್ವೈ ಭವಿಷ್ಯ