ವೈರಲ್ ವಿಡಿಯೋ: ಚಲಿಸುತ್ತಿದ್ದ ರೈಲಿನಲ್ಲೇ ಯೋಗ ಮಾಡಿದ ಪ್ರಯಾಣಿಕರು! - ವಂದೇ ಭಾರತ್ ಎಕ್ಸ್‌ಪ್ರೆಸ್
🎬 Watch Now: Feature Video
ಆಗ್ರಾ (ಉತ್ತರಪ್ರದೇಶ): ವಂದೇ ಭಾರತ್ ಎಕ್ಸ್‌ಪ್ರೆಸ್‌ನ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಪ್ರಯಾಣಿಕರು ಯೋಗ ಮಾಡುತ್ತಿದ್ದಾರೆ. ರೈಲಿನಲ್ಲಿ ಯೋಗ ಕಾರ್ಯಕ್ರಮ ನಡೆದಿದ್ದು, ಆ ಸಮಯದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಗಂಟೆಗೆ 160 ಕಿ.ಮೀ ವೇಗದಲ್ಲಿ ಓಡುತ್ತಿತ್ತು. ಈ ದೃಶ್ಯ ವೈರಲ್ ಆಗುತ್ತಿದ್ದಂತೆ ಜನರು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ಪ್ರಯಾಣಿಕರನ್ನು ರೈಲಿನಲ್ಲಿ ಯೋಗಾಸನ ಮಾಡುವಂತೆ ಪ್ರೇರೇಪಿಸಿದ ಯೋಗ ಗುರುಗಳ ಹೆಸರು ಕೃಷ್ಣ ಮಿಶ್ರಾ ಎಂದು ಹೇಳಲಾಗುತ್ತಿದೆ. ಯೋಗ ಗುರು ಕೃಷ್ಣ ಮಿಶ್ರಾ ಅವರೊಂದಿಗೆ ಪ್ರಣಯ್ ಮತ್ತು ಸುರೇಂದ್ರ ಮಿಶ್ರಾ ಭೋಪಾಲ್‌ನಿಂದ ವಂದೇ ಭಾರತಕ್ಕೆ ಏರಿದ್ದರು. ಅದೇ ಸಮಯದಲ್ಲಿ, ಮನವ್ ಕಲ್ರಾ, ನಮಿತಾ ಕಲ್ರಾ ಸೇರಿದಂತೆ ಇತರ ಪ್ರಯಾಣಿಕರು ಆಗ್ರಾದಿಂದ ಈ ರೈಲಿಗೆ ಏರಿದರು. ಅವರು ಮೊದಲ ಬಾರಿಗೆ ರೈಲಿನಲ್ಲಿ ಯೋಗ ಮಾಡಿದರು. ಚಲಿಸುತ್ತಿರುವ ರೈಲಿನಲ್ಲಿ ಯೋಗ ಮಾಡುವ ಅನುಭವ ಅದ್ಭುತ ಎಂದು ಬಣ್ಣಿಸಿದರು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಶೇರ್ ಮಾಡಲಾಗುತ್ತಿದ್ದು, ಜನರು ಇದನ್ನು ಲೈಕ್ ಮಾಡುತ್ತಿದ್ದಾರೆ. ಮಿಶ್ರ ಪ್ರತಿಕ್ರಿಯೆಯೂ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: International Yoga Day: ಯೋಗದ ಮಹತ್ವ ಸಾರಿದ ರಾಜಕೀಯ ಮುಖಂಡರು !