ವಿಜೃಂಭಣೆಯಿಂದ ನಡೆದ ಯಮುನೆಯ ಡೋಲಿ ಯಾತ್ರೆ: ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಭಾಗಿ - ವಿಡಿಯೋ - ಯಮುನೆಯ ಡೋಲಿಯನ್ನು ಯಮುನಾ ಮಂದಿರಕ್ಕೆ

🎬 Watch Now: Feature Video

thumbnail

By

Published : Apr 22, 2023, 12:38 PM IST

ಉತ್ತರಾಖಂಡ: ಇಂದು ಧಾಮಿ ಗ್ರಾಮ ಖಾರ್ಸಾಲಿಯಿಂದ ಯಮುನೆಯ ಡೋಲಿಯನ್ನು ಯಮುನಾ ಮಂದಿರಕ್ಕೆ ಕೊಂಡೊಯ್ಯಲಾಯಿತು. ಈ ವೇಳೆ, ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಭಾಗವಹಿಸಿದರು. ಡೋಲಿಯನ್ನು ವಾದ್ಯಗಳೊಂದಿಗೆ ಕೊಂಡೊಯ್ಯಲಾಯಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದಾರೆ. ಜೊತೆಗೆ ಹೆಲಿಕಾಪ್ಟರ್ ಮೂಲಕ  ಹೂವಿನ ದಳಗಳನ್ನು ಮೇಲಿನಿಂದ ಸುರಿಸಲಾಯಿತು.  

ಇದನ್ನೂ ಓದಿ:  ಶ್ರೀ ಸಿದ್ದಾರೂಢಸ್ವಾಮಿ ಮಠಕ್ಕೆ ಭೇಟಿ ನೀಡಿ, ಶ್ರೀಗಳ ದರ್ಶನ ಪಡೆದ ಜೆ.ಪಿ.ನಡ್ಡಾ

ಉತ್ತರಖಂಡದ ಚಾರ್​ ಧಾಮ್​ ಯಾತ್ರೆಯು ಇಂದಿನಿಂದ ಪ್ರಾರಂಭವಾಗಿದೆ. ಇದು ಭಾರತಲ್ಲೇ ಅತ್ಯಂತ ಪವಿತ್ರ ತೀರ್ಥಸ್ಥಳದ 4 ಯಾತ್ರ ಸ್ಥಳವಾಗಿದೆ. ಅವುಗಳೆಂದರೆ ಬದರಿನಾಥ್​, ಕೇದಾರನಾಥ್, ಗಂಗೋತ್ರಿ ಮತ್ತು ಯಮುನೋತ್ರಿ ಇವುಗಳೆಲ್ಲವೂ ಹಿಮಾಲಯದ ಎತ್ತರದಲ್ಲಿದೆ. 6 ತಿಂಗಳ ಕಾಲ ದೇವಾಲಯವು ಹಿಮದಿಂದ ಕೂಡಿರುತ್ತದೆ. ಆ ಸಂದರ್ಭದಲ್ಲಿ ದೇವರಿಗೆ ಪೂಜೆ ಸಲ್ಲಿಸಬೇಕಾಗಿರುವುದರಿಂದ ದೇವರನ್ನು ಬೇರೆ ಕಡೆ ಕೊಂಡೊಯ್ದು ಪೂಜೆ ಸಲ್ಲಿಸುತ್ತಾರೆ. ಹಿಮ ಕಡಿಮೆಯಾದ ನಂತರ ವಾಪಸ್​ ದೇವರನ್ನು ದೇವಸ್ಥಾನಕ್ಕೆ ಕರೆದುಕೊಂಡು ಬರುವ ಪದ್ದತಿಯೇ ಡೋಲಿ ಉತ್ಸವ. ಈ 4 ಧಾಮಗಳ ಬಾಗಿಲು ಇದೇ ತಿಂಗಳಿನಲ್ಲಿ ತೆರಯಲಾಗುತ್ತದೆ.

ಇದನ್ನೂ ಓದಿ: ಚಾರ್ಧಾಮ್​ ಯಾತ್ರೆ 2023: ಉಖಿಮಠದಿಂದ ಕೇದಾರನಾಥ ದೇವಸ್ಥಾನಕ್ಕೆ ಡೋಲಿ ಯಾತ್ರೆ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.