ವಿವಾಹಿತ ಮಹಿಳೆಯ ಅಪಹರಣ ಪ್ರಕರಣ: ಬಿಜೆಪಿ ಮುಖಂಡ ವಶಕ್ಕೆ - ಉತ್ತರಪ್ರದೇಶದಲ್ಲಿ ಮಹಿಳೆ ಅಪಹರಣ ಪ್ರಕರಣ

🎬 Watch Now: Feature Video

thumbnail

By

Published : Feb 8, 2023, 9:11 PM IST

Updated : Feb 14, 2023, 11:34 AM IST

ಬಸ್ತಿ (ಉತ್ತರಪ್ರದೇಶ): ಅತ್ತೆ ಮನೆಗೆ ಹೊರಟಿದ್ದ ವಿವಾಹಿತ ಮಹಿಳೆಯನ್ನು ಆಕೆಯ ಪ್ರಿಯಕರನಾಗಿದ್ದ ಬಿಜೆಪಿ ಮುಖಂಡ ಅಪಹರಿಸಿರುವ ಘಟನೆ ಇಲ್ಲಿಯ ಗೋಟ್ವಾ ಮೇಲ್ಸೇತುವೆ ಬಳಿಯ ರಾಷ್ಟ್ರೀಯ ಹೆದ್ದಾರಿ28 ರಲ್ಲಿ ಇಂದು ನಡೆದಿದೆ. ಈ ಕುರಿತು ಡಿಎಸ್ಪಿ ಶೇಷಮಣಿ ಉಪಾಧ್ಯಾಯ ಮಾತನಾಡಿ, "ಮಹಿಳೆ ತನ್ನ ಅತ್ತೆ ಮನೆಗೆಂದು ಸಂಬಂಧಿಕರೊಂದಿಗೆ ಕಾರಿನಲ್ಲಿ ಹೋಗುತ್ತಿದ್ದಾಗ ಬಿಜೆಪಿ ಧ್ವಜವಿರುವ ಬಿಳಿ ಬಣ್ಣದ ಫಾರ್ಚೂನರ್​ ಮಹಿಳೆ ಪ್ರಯಾಣಿಸುತ್ತಿದ್ದ ಕಾರಿಗೆ ಅಡ್ಡಹಾಕಿದೆ. ಬಳಿಕ ಕಾರಿನಿಂದ ಹೊರಬಂದ 6 ಜನರು ಮಹಿಳೆಯನ್ನು ಬಲವಂತವಾಗಿ ಕರೆದೊಯ್ದಿದ್ದಾರೆ. ವಿಷಯ ತಿಳಿದ ಕೂಡಲೇ ಮಹಿಳೆಯ ಸೋದರ ಮಾವ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ." 

ಈ ದೂರಿನ ಮೇರೆಗೆ ತನಿಖೆ ಆರಂಭಿಸಿದಾಗ ಕಾರು ಬಿಜೆಪಿ ಮುಖಂಡ ರಮೇಶ್​ ಎನ್ನುವವರಿಗೆ ಸೇರಿದ್ದು ಎಂದು ತಿಳಿದು ಬಂತು. ಕಾರು ಮತ್ತು ರಮೇಶ್​ ಅವರನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆ ನಡೆಸಿದಾಗ ಅಪಹರಿಸಿದ ಮಹಿಳೆ ಮತ್ತು ರಮೇಶ್​ಗೆ ಈ ಮುಂಚೆಯೇ ಸಂಬಂಧ ಇರುವುದು ತಿಳಿದು ಬಂದಿದೆ. ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಇದಾದ ಬಳಿಕ ಇಬ್ಬರನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್​ ಮುಂದೆ ಹಾಜರುಪಡಿಸಿದ್ದು ಮಹಿಳೆ ಹೇಳಿಕೆಯ ಮೇಲೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ" ಎಂದು ಮಾಹಿತಿ ನೀಡಿದರು. 

ಈ ಬಗ್ಗೆ ಮಹಿಳೆಯ ಪತಿ ಪ್ರತಿಕ್ರಿಯಿಸಿ, "ನಮ್ಮ ಮದುವೆಯಾಗಿ ಕೆಲವೇ ತಿಂಗಳುಗಳಾಗಿವೆ. ಅವರ ನಡುವಿನ ಸಂಬಂಧದ ಬಗ್ಗೆ ನನಗೆ ತಿಳಿದಿರಲಿಲ್ಲ" ಎಂದರು. 

ಇದನ್ನೂ ಓದಿ: ಬಿರಿಯಾನಿ ತಿನ್ನೋಣ ಬಾ ಎಂದು ಕರೆಯಿಸಿ ಅಪಹರಣ: ಹಣ ಕೊಡಲು ನಿರಾಕರಿಸಿದಕ್ಕೆ ಕಿಡ್ನಾಪ್​... 2 ಕಿಮೀ ಚೇಸ್​ ಮಾಡಿ ಆರೋಪಿ ಸೆರೆ

Last Updated : Feb 14, 2023, 11:34 AM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.