ಸಂಸತ್​ನಲ್ಲಿ ನಿಮ್ಮ ಸೋಲಿನ ಕೋಪ ಹೊರಹಾಕಬೇಡಿ: ಪ್ರಧಾನಿ ಮೋದಿ - ಸಂಸತ್ತಿನ ಚಳಿಗಾಲದ ಅಧಿವೇಶನ

🎬 Watch Now: Feature Video

thumbnail

By ETV Bharat Karnataka Team

Published : Dec 4, 2023, 1:06 PM IST

ನವದೆಹಲಿ: ''ಸಂಸತ್​ ಅಧಿವೇಶನದಲ್ಲಿ ವಿಧಾನಸಭೆ ಚುನಾವಣೆಗಳ ಸೋಲಿನ ಬಗ್ಗೆ ಹತಾಶೆ ಮತ್ತು ಕೋಪ ತೋರಿಸದೆ, ಜನಕೇಂದ್ರಿತ ವಿಷಯಗಳ ಬಗ್ಗೆ ಚರ್ಚೆ ಮಾಡುವುದರಲ್ಲಿ ರಚನಾತ್ಮಕ ಪಾತ್ರ ವಹಿಸಬೇಕು'' ಎಂದು ಪ್ರಧಾನಿ ನರೇಂದ್ರ ಮೋದಿ ವಿರೋಧ ಪಕ್ಷಗಳಿಗೆ ಸಲಹೆ ನೀಡಿದ್ದಾರೆ. 

ಇಂದು (ಸೋಮವಾರ) ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ವಿಧಾನಸಭೆ ಚುನಾವಣೆ ಫಲಿತಾಂಶದಿಂದ ನಮಗೆ ಉತ್ತೇಜನ ಸಿಕ್ಕಿದೆ. ಜನರು ನಕಾರಾತ್ಮಕತೆಯ ವಿರುದ್ಧ ಮತ ಚಲಾಯಿಸಿದ್ದಾರೆ. ಪ್ರಜಾಪ್ರಭುತ್ವದ ಬಾವುಟ ಹಾರಿಸಬೇಕಾದರೆ, ಎಲ್ಲ ಸಂಸದರು ಒಗ್ಗಟ್ಟಿನಿಂದ ಕೆಲಸ ಮಾಡಬೇಕೆಂದು ನಾನು ಬಯಸುತ್ತೇನೆ. ಚರ್ಚೆಗಳಿಗೆ ತಮ್ಮನ್ನು ತಾವು ಸಿದ್ಧಗೊಳಿಸಿಕೊಳ್ಳಬೇಕೆಂದು ನಾನು ವಿರೋಧಪಕ್ಷದವರನ್ನು ಕೋರುತ್ತೇನೆ. ವಿರೋಧ ಪಕ್ಷಗಳು ಕೋಪವನ್ನು ಹೊರಹಾಕಲು ಬದಲು, ಸಕಾರಾತ್ಮಕ ಮನಸ್ಸಿನಿಂದ ಸಂಸತ್​ಗೆ ಬರಲು ಇದು ಸುವರ್ಣಾವಕಾಶ. ಸಂಸತ್​ನ ಚಳಿಗಾಲದ ಅಧಿವೇಶನವನ್ನು ರಚನಾತ್ಮಕ ಚರ್ಚೆಗಳಿಂದ ನಡೆಸಬೇಕಿದೆ" ಎಂದು ಮೋದಿ ಹೇಳಿದರು.

''ತಮ್ಮ ಸಂಕುಚಿತ ಮಿತಿಗಳನ್ನು ಬದಿಗಿಟ್ಟು ಜೀವನದ ಸಕಾರಾತ್ಮಕ ಅಂಶಗಳ ಮೇಲೆ ಗಮನ ಕೇಂದ್ರೀಕರಿಸಬೇಕು. ಪ್ರಜಾಪ್ರಭುತ್ವದ ಚೈತನ್ಯವನ್ನು ಜೀವಂತವಾಗಿಡಲು ವಿರೋಧ ಪಕ್ಷವು ಮಹತ್ತರವಾದ ಪಾತ್ರವನ್ನು ಹೊಂದಿದೆ. ಇದು ನಿಮ್ಮ ಇಮೇಜ್ ಮೇಕ್ ಓವರ್‌ಗೆ ಸಮಯ'' ಎಂದು ಪ್ರಧಾನಿ ತಿಳಿಸಿದರು.

ಇದನ್ನೂ ಓದಿ: ಮಿಜೋರಾಂ ಮತ ಎಣಿಕೆ: ಸ್ಪಷ್ಟ ಬಹುಮತದತ್ತ ಝಡ್‌ಪಿಎಂ ದಾಪುಗಾಲು; ಸಿಎಂ, ಡಿಸಿಎಂಗೆ ಹಿನ್ನಡೆ

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.