ದಿನಸಿ ಅಂಗಡಿ ಬಾಗಿಲು ಮುರಿದು ಬಾಳೆಗೊನೆ, ಟೊಮೆಟೊ ತಿಂದ ಗಜರಾಜ - ವಿಡಿಯೋ - ಕಬ್ಬಿಗಾಗಿ ಬಸ್ ಅಡ್ಡ ಹಾಕಿದ ಕಾಡಾನೆ
🎬 Watch Now: Feature Video
ಚಾಮರಾಜನಗರ : ಚಾಮರಾಜನಗರದ ಪುಣಜನೂರು ಮತ್ತು ತಮಿಳುನಾಡಿನ ಅಸನೂರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳನ್ನು ಅಡ್ಡಗಟ್ಟುತ್ತಿದ್ದ ಕಾಡಾನೆಯೊಂದು ದಿನಸಿ ಅಂಗಡಿ ಬಾಗಿಲು ಮುರಿದು ಬಾಳೆಗೊನೆ, ಟೊಮೆಟೊ ತಿಂದಿರುವ ಘಟನೆ ನಡೆದಿದೆ.
ಅಸನೂರಿನ ವೆಂಕಟೇಶ್ ಎಂಬುವರ ದಿನಸಿ ಅಂಗಡಿಯ ಶಟರ್ ಮುರಿದ ಆನೆ, ಬಾಳೆಗೊನೆ ಎತ್ತಿಕೊಂಡಿದೆ. ಜೊತೆಗೆ, ಟೊಮೆಟೊ ಸೇರಿದಂತೆ ಇತರ ತರಕಾರಿ ತಿಂದಿದೆ. ಈ ವೇಳೆ ಕಾಡಾನೆ ದಾಳಿ ಮನಗಂಡ ಸ್ಥಳೀಯರು ಕಿರುಚಾಡಿ ಓಡಿಸಿದ್ದಾರೆ. ಸಿಸಿಟಿವಿಯಲ್ಲಿ ಆನೆ ದಾಂಧಲೆ ದೃಶ್ಯ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ.
ಇದನ್ನೂ ಓದಿ : Elephant stops Bus : ಚಾಮರಾಜನಗರದಲ್ಲಿ ಬಸ್ ತಡೆದು ಕಬ್ಬು ಹುಡುಕಿದ ಆನೆ- ವಿಡಿಯೋ
ಕಳೆದ ತಿಂಗಳ ಜುಲೈ 30 ರಂದು ಕಬ್ಬಿಗಾಗಿ ಬಸ್ ಅಡ್ಡ ಹಾಕಿದ ಕಾಡಾನೆ ಪ್ರಯಾಣಿಕರನ್ನು ಪೇಚಿಗೆ ಸಿಲುಕಿಸಿದ ಘಟನೆ ಅಸನೂರು ಸಮೀಪ ನಡೆದಿತ್ತು. ಸತ್ಯಮಂಗಲದಿಂದ ಮೈಸೂರಿಗೆ ತೆರಳುತ್ತಿದ್ದ ಬಸ್ ತಡೆದ ಕಾಡಾನೆ ಸೊಂಡಿಲಿನಿಂದ ತಡಕಾಡಿತ್ತು. ಕೊನೆಗೆ ಇದು ಕಬ್ಬು ತುಂಬಿದ ಲಾರಿಯಲ್ಲ ಎಂದು ತಿಳಿದು ಬಸ್ ಬಿಟ್ಟು ತೆರಳಿತ್ತು.