ಹಂಪಿಯಲ್ಲಿ ಅಪರೂಪದ ಬಿಳಿ ಮಣ್ಣು ಮುಕ್ಕ ಹಾವು ಪತ್ತೆ: ವಿಡಿಯೋ - etv bharat kannada
🎬 Watch Now: Feature Video
Published : Aug 29, 2023, 9:05 PM IST
ವಿಜಯನಗರ: ವಿಶ್ವವಿಖ್ಯಾತ ಹಂಪಿಯ ವಿಜಯ ವಿಠ್ಠಲ ದೇಗುಲದ ಆವರಣದಲ್ಲಿ ಅಪರೂಪದ ಬಿಳಿ ಮಣ್ಣು ಮುಕ್ಕ ಹಾವು ಪತ್ತೆಯಾಗಿದೆ. ಈ ಹಾವು ಕಂಡು ಭದ್ರತಾ ಸಿಬ್ಬಂದಿಗಳು ಹಾಗೂ ಪ್ರವಾಸಿಗರು ಬೆರಗಾಗಿದ್ದರು. ಜೊತೆಗೆ ಹಾವು ಯಾವ ಪ್ರಭೇದದ್ದು ಎಂದು ಗುರುತಿಸಲಾಗದೇ ಗೊಂದಲಕ್ಕೀಡಾಗಿದ್ದರು. ವಿಷಯ ತಿಳಿದ ಕಮಲಾಪುರದ ಉರಗ ರಕ್ಷಕ ಜಿ ಬಿ ಮಲ್ಲಿಕಾರ್ಜುನ ಸ್ಥಳಕ್ಕೆ ಬಂದು ಹಾವನ್ನು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ.
ಇದು ಸಾಮಾನ್ಯ ಜಾತಿಯ ಮಣ್ಣುಮುಕ್ಕ ಹಾವು. ಚರ್ಮಕ್ಕೆ ಬಣ್ಣ ನೀಡುವ ವರ್ಣ ದ್ರವ್ಯ ಗ್ರಂಥಿ ಅಂದರೆ ಮೆಲಾಲಿನ್ ಅಥವಾ ಪಿಗ್ಮೆಂಟ್ ಕೊರತೆಯಿಂದ ಚರ್ಮಕ್ಕೆ ಬಣ್ಣ ಬಾರದೇ ಈ ರೀತಿ ಬಿಳಿ ಬಣ್ಣಕ್ಕೆ ತಿರುಗಿರುತ್ತದೆ. ಇದನ್ನು ಅಲ್ಬಿನೋ ಸ್ನೇಕ್ಸ್ ಎಂದು ಕೂಡಾ ಕರೆಯುತ್ತಾರೆ. ಇದು ಆನುವಂಶಿಕ ಅಸಹಜತೆಯಾಗಿದೆ. ಇವುಗಳ ಅಸಹಜತೆ, ವರ್ಣ ದ್ರವ್ಯ ಮತ್ತು ಬಣ್ಣದಿಂದಾಗಿ ಈ ಹಾವುಗಳನ್ನು ಅಪರೂಪ ಎಂದು ಕರೆಯುತ್ತಾರೆ ಎಂದು ಅವರು ತಿಳಿಸಿದರು.
ಬಹುಶಃ ಕರ್ನಾಟಕದಲ್ಲಿ ಮೊದಲನೇ ಬಾರಿಗೆ ಇಂತಹ ಅಪರೂಪದ ಸಾಮಾನ್ಯ ಬಿಳಿ ಮಣ್ಣು ಮುಕ್ಕ ಹಾವು ಕಂಡುಬಂದಿದೆ. ಇದು ವಿಷಕಾರಿಯಲ್ಲದ ಹಾವಾಗಿದೆ. ಈ ಮಣ್ಣು ಮುಕ್ಕ ಹಾವುಗಳಲ್ಲಿ ಮೂರು ಜಾತಿಯ ಹಾವುಳಿದ್ದು, ಸಾಮಾನ್ಯ ಮಣ್ಣು ಮುಕ್ಕ ಹಾವು, ಕೆಂಪು ಮಣ್ಣು ಮುಕ್ಕ ಹಾವು, ವೇಟೆಕಾರ್ ಮಣ್ಣು ಮುಕ್ಕ ಹಾವುಗಳಿವೆ ಎಂದು ಉರಗ ರಕ್ಷಕ ಮಲ್ಲಿಕಾರ್ಜುನ ಮಾಹಿತಿ ನೀಡಿದರು.
ಇದನ್ನೂ ಓದಿ: ಬರೋಬ್ಬರಿ 174 ಕಿ.ಮೀ ಹಿಮ್ಮುಖವಾಗಿ ಟ್ರ್ಯಾಕ್ಟರ್ ಚಲಾಯಿಸಿ ಹರಕೆ ತೀರಿಸಿದ ಹಾವೇರಿಯ ಯುವಕ: ವಿಡಿಯೋ