ಬಾಹ್ಯಾಕಾಶ ಕ್ಷೇತ್ರದಲ್ಲಿ ನಾವೇ ಪ್ರವರ್ತಕರಾಗುತ್ತೇವೆ: ಹಿರಿಯ ವಿಜ್ಞಾನಿ ಡಾ ರಾಮಕೃಷ್ಣ ನಗರಿ

🎬 Watch Now: Feature Video

thumbnail

ಹೈದರಾಬಾದ್​: ಇಸ್ರೋದ ಚಂದ್ರಯಾನ 3 ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಈ ನಿಟ್ಟಿನಲ್ಲಿ ಇಡೀ ವಿಶ್ವವೇ ಶ್ರೀಹರಿಕೋಟಾದತ್ತ ಕುತೂಹಲದಿಂದ ನೋಡುತ್ತಿದೆ. ಶುಕ್ರವಾರ ಮಧ್ಯಾಹ್ನ 2.35ಕ್ಕೆ ಶ್ರೀಹರಿ ಕೋಟಾದಿಂದ ಚಂದ್ರಯಾನ-3 ಉಡಾವಣೆಯಾಗಲಿದೆ. ಭೂಮಿಯಿಂದ ಸುಮಾರು 3.84 ಲಕ್ಷ ಕಿ.ಮೀ ದೂರದಲ್ಲಿರುವ ಚಂದ್ರನ ತನಕ ಮೂರು ಹಂತಗಳಲ್ಲಿ ಪ್ರಯೋಗ ಮುಂದುವರಿಯಲಿದೆ.

ಇದನ್ನೂ ಓದಿ: Chandrayaan-3: ಜುಲೈ 13ರಂದು ಮಧ್ಯಾಹ್ನ 2.30ಕ್ಕೆ ಚಂದ್ರಯಾನ-3 ಉಡಾವಣೆ: ಇಸ್ರೋ ಘೋಷಣೆ

ಈ ಬಗ್ಗೆ ಇಸ್ರೋದ ನಿವೃತ್ತ ಹಿರಿಯ ವಿಜ್ಞಾನಿ ರಾಮಕೃಷ್ಣ ನಗರಿ ಮಾತನಾಡಿದ್ದಾರೆ. ಹಿಂದಿನ ಮಿಷನ್‌ನಿಂದ ಪಾಠಗಳನ್ನು ಕಲಿತಿರುವುದರಿಂದ ಚಂದ್ರಯಾನ-3 ಯಶಸ್ವಿಯಾಗಲಿದೆ ಎಂದು ರಾಮಕೃಷ್ಣ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. "ಚಂದ್ರಯಾನ-2 ರ ಭಾಗಶಃ ಯಶಸ್ಸಿನ ನಂತರ ಇಸ್ರೋಗೆ ಈ ಮಿಷನ್ ಅತ್ಯಂತ ನಿರ್ಣಾಯಕವಾಗಿದೆ. ಹಿಂದಿನ ಕಾರ್ಯಾಚರಣೆಯಲ್ಲಿ, ನಾವು ಕ್ರಾಶ್ ಲ್ಯಾಂಡಿಂಗ್ ಮಾಡಿದ್ದೆವು. ಆದರೆ ಈಗ ಸುಗಮ ಲ್ಯಾಂಡಿಂಗ್​ಗಾಗಿ ಯಾಂತ್ರಿಕ ವ್ಯವಸ್ಥೆಯನ್ನು ಸಾಕಷ್ಟು ಅಭಿವೃದ್ಧಿ ಪಡಿಸಿದ್ದೇವೆ. ಈ ಬಾರಿ ನಾವು ಖಂಡಿತವಾಗಿಯೂ ಯಶಸ್ವಿಯಾಗುತ್ತೇವೆ ಎಂದು ನಿವೃತ್ತ ಹಿರಿಯ ವಿಜ್ಞಾನಿ ನಗಾರಿ ಹೇಳಿದ್ದಾರೆ.

ಮಿಷನ್‌ನಿಂದ ಸಾಮಾನ್ಯ ಜನರು ಪಡೆಯುವ ಅನುಕೂಲಗಳ ಕುರಿತು ಚರ್ಚಿಸಿದ ಹಿರಿಯ ವಿಜ್ಞಾನಿ ನಗಾರಿ ಅವರು, ಯಾವುದೇ ಬಾಹ್ಯಾಕಾಶ ಚಟುವಟಿಕೆಗಳು ಸಮುದಾಯದ ಒಟ್ಟಾರೆ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ನಾನು 1971 ರಲ್ಲಿ ಇಸ್ರೋಗೆ ಸೇರಿದಾಗ ಬಾಹ್ಯಾಕಾಶ ಚಟುವಟಿಕೆಗಳಿಂದ ಸಾಮಾನ್ಯ ಜನರು ಏನು ಪ್ರಯೋಜನ ಪಡೆಯುತ್ತಾರೆ ಎಂದು ಜನರು ಕೇಳುತ್ತಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ತಂತ್ರಜ್ಞಾನ ಹೇಗೆ ಅಭಿವೃದ್ಧಿ ಆಗಿದೆ ಎಂಬುದನ್ನು ನೋಡಿದ್ದೇವೆ.  ಉಪಗ್ರಹಗಳ ಉಡಾವಣೆ ಮಾಡುವ ಮೂಲಕ ಇಸ್ರೋ, ವಾಣಿಜ್ಯ ಮತ್ತು ಬ್ಯಾಂಕಿಂಗ್​ ಹಾಗೂ ಮಾಧ್ಯಮ ಹಾಗೂ ಸಂವಹನ ಲೋಕದಲ್ಲಿ ಏನೆಲ್ಲ ಕ್ರಾಂತಿ ಆಗಿದೆ. ಆ ಮೂಲಕ ಸಮುದಾಯಕ್ಕೆ ಹೇಗೆ ಕೊಡುಗೆ ನೀಡಿದೆ ಎಂಬುದನ್ನು ನಾವು ನೋಡಿದ್ದೇವೆ ಎಂಬುದನ್ನು ವಿಜ್ಞಾನಿ ರಾಮಕೃಷ್ಣ ಅವರು ನೆನಪಿಸಿಕೊಂಡಿದ್ದಾರೆ. 

ಭಾರತ ಈಗಾಗಲೇ ಬಾಹ್ಯಾಕಾಶ ಕ್ಷೇತ್ರದಲ್ಲಿ ಮುನ್ನಡೆಯುತ್ತಿರುವ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ನಿರ್ಣಾಯಕ ನಾಯಕರಾಗಿ ನಿಲ್ಲಲು ನಮ್ಮ ಮುಂದಿರುವ ಅವಕಾಶಗಳೇನು? ಎಂಬುದರ ಬಗ್ಗೆ ಇಸ್ರೋ ನಿವೃತ್ತ ಹಿರಿಯ ವಿಜ್ಞಾನಿ ರಾಮಕೃಷ್ಣ ನಗರಿ ಈಟಿವಿ ಭಾರತ್ ಸಂದರ್ಶನದಲ್ಲಿ ವಿವರವಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: Chandrayaan -3 : ಜುಲೈ 14ರ ಮಧ್ಯಾಹ್ನ 2.35ಕ್ಕೆ ಚಂದ್ರಯಾನ-3 ಉಡಾವಣೆ..ಇಸ್ರೋ ಅಧ್ಯಕ್ಷ ಎಸ್​ ಸೋಮನಾಥ್

Last Updated : Jul 13, 2023, 10:48 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.