ಭಿನ್ನಮತರನ್ನು ವಾಪಸ್ ಕಾಂಗ್ರೆಸ್ ಪಕ್ಷಕ್ಕೆ ಕರೆಸುತ್ತೇವೆ: ಡಿಕೆಶಿ - Shri kshetra dharmasthala
🎬 Watch Now: Feature Video
ಬೆಳ್ತಂಗಡಿ(ದಕ್ಷಿಣ ಕನ್ನಡ): ಬಿಜೆಪಿ ಯಾವುದೇ ತಂತ್ರಗಾರಿಕೆ ಬಾಂಬ್ ಸಿಡಿಸಿದರೂ ನಮ್ಮಲ್ಲಿ ಭಿನ್ನಮತರನ್ನು ಸಮಾಧಾನ ಪಡಿಸಿ ಅವರನ್ನು ವಾಪಸ್ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ. ಎಲ್ಲರಿಗೂ ಅಧಿಕಾರ ಹಂಚುತ್ತೇವೆ. ಯಾವ ಅಭ್ಯರ್ಥಿಗಳೂ ಗಾಬರಿಗೊಳ್ಳುವ ಅಗತ್ಯವಿಲ್ಲ. ಬಿಜೆಪಿ ಒಡೆದ ಮನೆ, ಒಡೆದ ಪಕ್ಷ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ನಾವು ಜನರ ಸೇವೆ ಮಾಡುತ್ತೇವೆ. ಬಿಜೆಪಿ ಏನೇ ಪ್ರಯತ್ನ ಮಾಡಿದರೂ ಉಪಯೋಗ ಆಗೋಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದ ಅವರು ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ ಜಗದೀಶ್ ಶೆಟ್ಟರ್ ಸೋಲಿಸಲು ಆರ್ ಎಸ್ಎಸ್ ಕೂಡಾ ಮುಂದಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಅವರ ಪ್ರಯತ್ನ ಮಾಡಿಯೇ ಮಾಡ್ತಾರೆ. ನಮ್ಮ ಕಾಂಗ್ರೆಸ್ ಪಕ್ಷದ ಬದ್ಧತೆ, ಕಾರ್ಯಕರ್ತರು, ಜನರು ಎಲ್ಲರೂ ರಾಜ್ಯದಲ್ಲಿ ಬದಲಾವಣೆ ಬಯಸಿದ್ದಾರೆ. ಅವರ ಪಕ್ಷದವರೇ ಬಿಜೆಪಿಯನ್ನು ತೆಗೆಯಲು ಮುಂದಾಗಿದ್ದಾರೆ ಎಂದರು.
ಲಿಂಗಾಯತರನ್ನು ಒಡೆಯಲು ಡಿಕೆಶಿಯವರು ಮುಂದಾಗಿದ್ದಾರೆ ಎಂಬ ಸೋಮಣ್ಣ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಡಿ ಕೆ ಶಿವಕುಮಾರ್ ಅವರು, ನಾನು ಪ್ರತಿಭಟನೆ ಮಾಡಿದ್ದೇನಾ?, ನಮ್ಮ ಸಮಾಜ ಪ್ರತಿಭಟನೆ ಮಾಡಿದೆಯೇ?. ಅವರ ಸಮಾಜದವರೇ ಈ ರಾಜ್ಯದಲ್ಲಿ ಅವರ ನೋವು ವ್ಯಕ್ತಪಡಿಸಿ, ಮೀಸಲಾತಿ ನೀಡಬೇಕೆಂದು ಹೋರಾಟ ಮಾಡಿದ್ದಾರೆ. ಸರ್ಕಾರಕ್ಕೆ ಧಿಕ್ಕಾರ ಕೂಗಿ ಪ್ರತಿಭಟನೆಗಿಳಿದಿದ್ದಾರೆ. ನೂರಾರು ಕಿ.ಮೀ. ನಡೆದಿದ್ದಾರೆ ಎಂದು ಡಿಕೆಶಿ ಹೇಳಿದರು.
ಇದನ್ನೂ ಓದಿ: "ಸತ್ಯವನ್ನು ಮಾತನಾಡಿದ್ದಕ್ಕಾಗಿ ನಾನು ಯಾವುದೇ ಬೆಲೆ ತೆರಲು ಸಿದ್ಧ": ರಾಹುಲ್ ಗಾಂಧಿ