ರಂಜಾನ್ ಪ್ರಾರ್ಥನೆ ವೇಳೆ ಇಮಾಮ್ ಹೆಗಲೇರಿತು ಬೆಕ್ಕು: ವಿಡಿಯೋ ನೋಡಿ - ಬೆಕ್ಕು ವಿಡಿಯೋ ವೈರಲ್
🎬 Watch Now: Feature Video
ಮಸೀದಿಯಲ್ಲಿ ಮುಸ್ಲಿಮರು ರಂಜಾನ್ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಬೆಕ್ಕು ಎಂಟ್ರಿ ಕೊಟ್ಟಿರುವ ಕುತೂಹಲಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇಮಾಮ್ ಸುತ್ತಲೂ ಬೆಕ್ಕು ತಿರುಗುವುದು ಮತ್ತು ಹೆಗಲ ಮೇಲೇರಿ ಓಡಾಡುವ ದೃಶ್ಯಗಳು ವಿಡಿಯೋದಲ್ಲಿವೆ. ಶೇಖ್ ವಾಲಿದ್ ಮೆಹ್ಸಾಸ್ ಎಂಬುವವರು ತಮ್ಮ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಇದನ್ನು ಪೋಸ್ಟ್ ಮಾಡಿದ್ದಾರೆ.
ಅಲ್ಜೀರಿಯಾ ಪ್ರಾಂತ್ಯದ ಬೋರ್ಡ್ಜ್ ಬೌ ಅರೆರಿಡ್ಜ್‌ನಲ್ಲಿರುವ ಅಬು ಬಕರ್ ಅಲ್-ಸಿದ್ದಿಕ್ ಮಸೀದಿಯಲ್ಲಿ ಏಪ್ರಿಲ್ 3ರಂದು ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ವಿಡಿಯೋ ಹಂಚಿಕೊಂಡಿರುವ ಶೇಖ್ ವಾಲಿದ್, "ಪವಿತ್ರ ಕುರಾನ್ ಪಠಣದಿಂದ ಪ್ರಾಣಿಗಳೂ ಸಹ ವಿನಮ್ರವಾಗಿವೆ. ಬೆಕ್ಕೊಂದು ಪ್ರಾರ್ಥನೆ ಸಲ್ಲಿಸುತ್ತಿರುವ ಇಮಾಮ್ ಭುಜದ ಮೇಲೆ ಹೇಗೆ ಮೇಲೇರುತ್ತಿದೆ ಎಂಬುದನ್ನು ನೋಡಿ" ಎಂದು ಬರೆದಿದ್ದಾರೆ.
ಇಮಾಮ್ ಸುತ್ತಲೂ ಬೆಕ್ಕು ಅಲೆದಾಡುತ್ತದೆ. ನಂತರ ಅವರ ಕಾಲುಗಳನ್ನು ಸವರಿ, ಬಟ್ಟೆ ಹಿಡಿದು ದೇಹದ ಮೇಲೇರಿ ಕುಳಿತುಕೊಳ್ಳುತ್ತದೆ. ಹೀಗಿದ್ದರೂ ಇಮಾಮ್ ಪ್ರಾರ್ಥನೆ ಮುಂದುವರೆಸುವ ದೃಶ್ಯಗಳನ್ನು ನೋಡಬಹುದು. ನೆಟಿಜನ್‌ಗಳಿಂದ ಹಲವು ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಇದನ್ನೂ ಓದಿ: ಕಾಫಿ ಎಸ್ಟೇಟ್ನಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪ ಸೆರೆಹಿಡಿದ ಉರಗ ತಜ್ಞ