ಡೇಟಿಂಗ್ ವದಂತಿ: ಅನನ್ಯಾ ಬಗ್ಗೆ ಕೇಳಿದಾಗ ಮುಗುಳುನಗೆ ಬೀರಿದ ಆದಿತ್ಯ ರಾಯ್ - ಈಟಿವಿ ಭಾರತ ಕನ್ನಡ
🎬 Watch Now: Feature Video
ಹೈದರಾಬಾದ್ : ರಿಲಯನ್ಸ್ ಫೌಂಡೇಶನ್ನ ಅಧ್ಯಕ್ಷೆ ನೀತಾ ಅಂಬಾನಿ ಅವರ, ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ನ (ಎನ್ಎಮ್ಎಸಿಸಿ) ಉದ್ಘಾಟನಾ ಸಮಾರಂಭ ಮುಂಬೈನಲ್ಲಿ ಬಹಳ ಅದ್ಧೂರಿಯಾಗಿ ನಡೆದಿದೆ. ಈ ಕಾರ್ಯಕ್ರಮಕ್ಕೆ ದೇಶ ವಿದೇಶಗಳಿಂದ ಗಣ್ಯರು, ಚಿತ್ರ ನಟರು ಆಗಮಿಸಿದ್ದರು. ಈ ವೇಳೆ, ಪಾಪಾರಾಜಿಗಳು ತಮ್ಮ ಪ್ರಶ್ನೆಗಳ ಮೂಲಕ ನಟ ನಟಿಯರ ಕಾಳೆಲೆದ ದೃಶ್ಯಗಳು ಕಂಡುಬಂತು.
ಮುಂಬೈನಲ್ಲಿ ಕಲ್ಚರಲ್ ಸೆಂಟರ್ನ ಉದ್ಘಾಟನಾ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗಿತ್ತು. ಜೊತೆಗೆ ವಿವಿಧ ಸಾಂಸ್ಕೃತಿಕ ಮತ್ತು ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ ನಟ ನಟಿಯರು ಕಣ್ಣು ಕುಕ್ಕುವಂತೆ ಉಡುಪುಗಳನ್ನು ಧರಿಸಿ ಬಂದಿದ್ದರು. ಈ ವೇಳೆ, ಪಾಪಾರಾಜಿಗಳು ಕೆಲ ನಟ ನಟಿಯರ ಕಾಲೆಳೆದರು.
ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಬಾಲಿವುಡ್ ನಟ ಆದಿತ್ಯ ರಾಯ್ ಕಪೂರ್ ಫೋಟೋಗಳಿಗೆ ಪೋಸ್ ನೀಡುತ್ತಿದ್ದರು. ಈ ವೇಳೆ, ಪಾಪರಾಜಿಯೊಬ್ಬರು ಅನನ್ಯ ಮೇಡಮ್ ಬಂದಿಲ್ವಾ ಎಂದು ಕೇಳಿದ್ದಾರೆ. ಈ ವೇಳೆ ಮುಗುಳ್ನಗೆ ಬೀರಿದ ಆದಿತ್ಯ ರಾಯ್ ಏನೂ ಪ್ರತಿಕ್ರಿಯಿಸದೇ ಅಲ್ಲಿಂದ ತೆರಳಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ ಅನನ್ಯಾ ಪಾಂಡೆ ಕೂಡ ಪಾಲ್ಗೊಂಡಿದ್ದರು. ಅನನ್ಯಾ ಅವರು ರಾಹುಲ್ ಮಿಶ್ರಾ ಅವರು ವಿನ್ಯಾಸಗೊಳಿಸಿದ ಸುಂದರವಾದ ಬೊಟಾನಿಕಲ್ ಗೌನ್ ಧರಿಸಿ ಮಿಂಚುತ್ತಿದ್ದರು.
ಕಳೆದ ವರ್ಷ ಮೇ ತಿಂಗಳಿನಲ್ಲಿ ನಡೆದ ಚಿತ್ರ ನಿರ್ಮಾಪಕ ಕರಣ್ ಜೋಹರ್ 50 ನೇ ಹುಟ್ಟುಹಬ್ಬ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಇಬ್ಬರು ಡೇಟಿಂಗ್ ನಡೆಸುತ್ತಿರುವುದಾಗಿ ವದಂತಿ ಹಬ್ಬಿತ್ತು. ಅಷ್ಟೇ ಅಲ್ಲದೆ ಇತ್ತೀಚೆಗೆ ನಡೆದ ಲಕ್ಮೇ ಫ್ಯಾಶನ್ ವೀಕ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಡೇಟಿಂಗ್ ನಡೆಸುತ್ತಿರುವ ಬಗ್ಗೆ ಸುಳಿವು ನೀಡಿದ್ದರು. ಇನ್ನು ಈ ಬಗ್ಗೆ ಈ ಜೋಡಿ ಹಕ್ಕಿಗಳು ಇನ್ನೂ ಅಧಿಕೃತವಾಗಿ ಯಾವುದೇ ವಿಷಯವನ್ನು ಬಹಿರಂಗಪಡಿಸಿಲ್ಲ.
ಇದನ್ನೂ ಓದಿ : 'ಮರೆಯಲಾಗದ ಭಾರತದ ಮೊದಲ ಪ್ರವಾಸ'.. ಅಂಬಾನಿ ಕುಟುಂಬಕ್ಕೆ ಥ್ಯಾಂಕ್ಸ್ ಎಂದ ಸೂಪರ್ ಮಾಡೆಲ್ ಜಿಜಿ ಹಡಿದ್