ಮನೆ ಗೋಡೆ ಕುಸಿತ: ಅವಶೇಷಗಳಡಿ ಸಿಲುಕಿ ಒಡಹುಟ್ಟಿದ ನಾಲ್ವರು ಪುಟ್ಟ ಮಕ್ಕಳು ಬಲಿ! - ಇಟಾವಾ ಜಿಲ್ಲಾಧಿಕಾರಿ ಅವ್ನಿಶ್ ರೈ
🎬 Watch Now: Feature Video
ಇಟವಾ(ಉತ್ತರ ಪ್ರದೇಶ): ಮನೆ ಗೋಡೆ ಕುಸಿದು ಪತಿ-ಪತ್ನಿ ಮಕ್ಕಳು ಸೇರಿದಂತೆ ಒಟ್ಟು ಆರು ಮಂದಿ ದಾರುಣವಾಗಿ ಮೃತಪಟ್ಟಿರುವ ದುರಂತ ಕಳೆದ ರಾತ್ರಿ ಉತ್ತರ ಪ್ರದೇಶದ ಇಟವಾ ಜಿಲ್ಲೆಯಲ್ಲಿ ಸಂಭವಿಸಿದೆ. ದುರ್ಘಟನೆಯಲ್ಲಿ ಮೃತಪಟ್ಟ 6 ಮಂದಿಯ ಪೈಕಿ ನಾಲ್ವರು ಮಕ್ಕಳ ಪೋಷಕರು ಈಗಾಗಲೇ ಮೃತಪಟ್ಟಿದ್ದಾರೆ. ಈ ಮಕ್ಕಳು ತಮ್ಮ ಅಜ್ಜಿಯೊಂದಿಗೆ ವಾಸವಾಗಿದ್ದರು. ಇದೀಗ ವಿಧಿಯಾಟಕ್ಕೆ ಪುಟ್ಟ ಕಂದಮ್ಮಗಳೂ ಕೂಡ ಇಹಲೋಕ ತ್ಯಜಿಸಿವೆ. ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಅವನೀಶ್ ರೈ, ಇಟಾವಾದ ಸಿವಿಲ್ ಲೈನ್ಸ್ ಪೊಲೀಸ್ ಠಾಣೆ ವ್ಯಾಪ್ತಿಯ ಚಂದ್ರಾಪುರ ಗ್ರಾಮದಲ್ಲಿ ರಾತ್ರಿ 1 ಗಂಟೆ ಸುಮಾರಿಗೆ ಮನೆ ಗೋಡೆ ಕುಸಿದಿದೆ. ಅವಶೇಷಗಳಡಿ ಮಕ್ಕಳು ಆರು ಜನರು ಸಿಲುಕಿ ಮೃತಪಟ್ಟಿದ್ದಾರೆ. ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಅವನೀಶ್ ರೈ, ಇಟಾವಾದ ಸಿವಿಲ್ ಲೈನ್ಸ್ ಪೊಲೀಸ್ ಠಾಣೆ ವ್ಯಾಪ್ತಿಯ ಚಂದ್ರಾಪುರ ಗ್ರಾಮದಲ್ಲಿ ರಾತ್ರಿ 1 ಗಂಟೆ ಸುಮಾರಿಗೆ ಮನೆ ಗೋಡೆ ಕುಸಿದಿದೆ. ಅವಶೇಷಗಳಡಿ ಮಕ್ಕಳು ಆರು ಜನರು ಸಿಲುಕಿ ಮೃತಪಟ್ಟಿದ್ದಾರೆ. ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.
Last Updated : Feb 3, 2023, 8:28 PM IST