ಮೇ 10 ಓಟು ಒತ್ತು, ಮತದಾರರನ್ನು ಗೆಲ್ಲಿಸುವ ಅಭ್ಯರ್ಥಿಯನ್ನು ಆರಿಸಿ: ಹಾಸ್ಯನಟ ಧರ್ಮಣ್ಣ - ಕರ್ನಾಟಕ ಚುನಾವಣೆ 2023 ವಿಧಾನಸಭೆ ಚುನಾವಣೆ
🎬 Watch Now: Feature Video
ಬೆಂಗಳೂರು: 'ನಮ್ಮ ಮತ ನಮ್ಮ ಹಕ್ಕು' ಎಂಬ ಸಂದೇಶದೊಂದಿಗೆ ಹಾಸ್ಯನಟ ಧರ್ಮಣ್ಣ ಕಡೂರು ಮತದಾನ ಜಾಗೃತಿ ಮೂಡಿಸುವ ವಿಡಿಯೋ ಹಂಚಿಕೊಂಡಿದ್ದಾರೆ. ನಾಳೆ ರಾಜ್ಯಾದ್ಯಂತ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದೆ. ನಾಡಿನ ಜನತೆ ತಮ್ಮ ಅಮೂಲ್ಯವಾದ ಮತ ನೀಡುವ ಮೂಲಕ ತಮ್ಮ ಹಕ್ಕು ಚಲಾಯಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
"ತಪ್ಪದೆ ಎಲ್ಲರೂ ಮತದಾನ ಮಾಡಿ. ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡಿ. ರಾಜಕೀಯ ಸುಲಭವಾಗಿ ಕೈಗೆಟುಕುವ ವೃತ್ತಿ ಅಲ್ಲ. ಇಲ್ಲಿ ಸಂಬಂಧಗಳಿಗೆ ಬೆಲೆಯೂ ಇರುವುದಿಲ್ಲ. ಚುನಾವಣೆ ಬಂದ ಕೂಡಲೇ ಅಣ್ಣ ತಮ್ಮ, ಅತ್ತಿಗೆ ನಾದಿನಿ, ಸಂಬಂಧದವರೇ ವೈರಿಗಳಾಗಿ ಬಿಡುತ್ತಾರೆ. ಆಗ ಒಬ್ಬ ಶಾಸಕನ್ನು ಗೆಲ್ಲಿಸುವುದು ಸಂಬಂಧ ಇಲ್ಲದೇ ಇರುವ ನಾವು, ಮತದಾರರು".
"ಇಲ್ಲಿ ಗೆಲ್ಲಿಸುವುದು ಸ್ನೇಹ ಪ್ರೀತಿ ನಂಬಿಕೆಯೇ ಹೊರತು, ಹತ್ತಿರದ ಸಂಬಂಧಿಗಳಲ್ಲ. ಆದರೆ ಶಾಸಕ ಒಂದು ಬಾರಿ ಗೆದ್ದ ನಂತರ ಅವನ ಬಳಿ ಇರುವುದು ನಾವು ಮತದಾರರಲ್ಲ, ಅವನ ಅದೇ ಸಂಬಂಧಿಗಳು. ಅದಕ್ಕಾಗಿ ನಾವಿಲ್ಲಿ ಗೆಲ್ಲಿಸಬೇಕಾಗಿರುವುದು ಮತದಾರರಾದ ನಮ್ಮನ್ನು ಗೆಲ್ಲಿಸುವವರನ್ನು. ದಯಮಾಡಿ ಉತ್ತಮ ಆಡಳಿತ ನೀಡುವ ಪ್ರೀತಿ, ಸ್ನೇಹ, ನಂಬಿಕೆಗೆ ಅರ್ಹನಾದ ಹಾಗೆಯೇ ನಮ್ಮ ಭಾಷೆ, ಸಂಸ್ಕೃತಿ, ಕಲೆ, ನಾಡಿನ ಏಳಿಗೆಗೆ ದುಡಿಯುವ ಯೋಗ್ಯ ಅಭ್ಯರ್ಥಿಯನ್ನು ಆರಿಸಿ. ಮೇ 10 ಓಟು ಒತ್ತು" ಎಂದಿದ್ದಾರೆ.
ಇದನ್ನೂ ಓದಿ: ಇಂದು ಮನೆ ಮನೆ ಪ್ರಚಾರ: ನಾಳೆ ವೋಟ್ ಮಾಡಲು ಮರೆಯದಿರಿ