ಚಿತ್ರದುರ್ಗದಲ್ಲಿ ಮಠಾಧೀಶರಿಂದ ಹಕ್ಕು ಚಲಾವಣೆ-ವಿಡಿಯೋ

By

Published : May 10, 2023, 3:45 PM IST

thumbnail

ಚಿತ್ರದುರ್ಗ: ಜಿಲ್ಲೆಯ ಮಠಗಳ ವಿವಿಧ ಸಮುದಾಯಗಳ ಮಠಾಧೀಶರು ಹೆಚ್ಚಿನ ಸಂಖ್ಯೆಯಲ್ಲಿ ಇಂದು ಮತದಾನ ಮಾಡಿದರು. ಕುರುಬರಹಟ್ಟಿಯ ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಶ್ರೀಗಳು ಮತದಾನ ಮಾಡಿದರು. ಕುಂಚಿಟಿಗ ಮಠದ ಶ್ರೀ ಶಾಂತವೀರ ಶ್ರೀಗಳು, ಭೋವಿ ಮಠದ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ, ಮಾಚಿದೇವ ಮಠದ ಬಸವ ಮಾಚಿದೇವರು, ಛಲವಾದಿ ಮಠದ ಬಸವ ವಾಗಿದೇವರು, ಯಾದವ ಮಠದ ಶ್ರೀಕೃಷ್ಣ ಯಾದವ ಸ್ವಾಮೀಜಿ ಮತ ಚಲಾಯಿಸಿದರು.

ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಪಕ್ಷಗಳಿಂದ ಘಟಾನುಘಟಿ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ. ಈ ಕ್ಷೇತ್ರದಲ್ಲಿ ಜೆಡಿಎಸ್​ನಿಂದ ರಘು ಆಚಾರ್, ಕಾಂಗ್ರೆಸ್​ನಿಂದ ಕೆ.ಸಿ. ವೀರೇಂದ್ರ, ಬಿಜೆಪಿ ಪಕ್ಷದಿಂದ ಜಿ ಎಚ್ ತಿಪ್ಪಾರೆಡ್ಡಿ ಸ್ಪರ್ಧಿಸಿದ್ದಾರೆ. ಇನ್ನು ರಾಜ್ಯದಲ್ಲಿ ಬಿರುಸಿನ ಮತದಾನ ನಡೆಯುತ್ತಿದ್ದು, ಬೆಳಗ್ಗೆಯಿಂದ ಈವರೆಗೆ ನಡೆದ ಮತದಾನದಲ್ಲಿ ಮತದಾನ ಪ್ರಮಾಣ ಸುಮಾರು 40 ಶೇಕಡಕ್ಕಿಂತ ಹೆಚ್ಚಾಗಿದೆ. ಯುವ ಮತದಾರರಿಂದ ಹಿಡಿದು ವೃದ್ಧರವರೆಗು ಯಶಸ್ವಿಯಾಗಿ ಸಾರ್ವತ್ರಿಕ ವೋಟಿಂಗ್​ ನಡೆಯುತ್ತಿದೆ. ಈ ಮಧ್ಯೆ ಹಲವೆಡೆ ಸಂಘರ್ಷಗಳು ನಡೆಯುತ್ತಿದ್ದು, ಇದೆಲ್ಲವನ್ನು ಪೊಲೀಸರು​ ನಿಯಂತ್ರಿಸಿ ಪರಿಸ್ಥಿತಿಯನ್ನು ಹತೋಟಿಗ ತರುತ್ತಿದ್ದಾರೆ. 

ಇದನ್ನೂ ಓದಿ: ಹಾಸನದಲ್ಲಿ ಹೆಚ್‌.ಡಿ.ದೇವೇಗೌಡ ದಂಪತಿಯಿಂದ ಮತದಾನ- ವಿಡಿಯೋ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.