ವಿನಯ್ ಕುಲಕರ್ಣಿ ಶಿಗ್ಗಾಂವಿ ಸ್ಪರ್ಧೆ ವಿಚಾರ: ಪತ್ನಿ ಶಿವಲೀಲಾ ಕುಲಕರ್ಣಿ ಹೇಳಿದ್ದೇನು? - Shivleela objected to the media
🎬 Watch Now: Feature Video
ಧಾರವಾಡ: ಮಾಜಿ ಸಚಿವ ವಿನಯ್ ಕುಲಕರ್ಣಿ ಶಿಗ್ಗಾಂವಿ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ವಿರುದ್ಧ ವಿನಯ್ ಪತ್ನಿ ಶಿವಲೀಲಾ ಕುಲಕರ್ಣಿ ಸಿಡಿಮಿಡಿಗೊಂಡಿದ್ದಾರೆ. ಹೈಕಮಾಂಡ್ ಹೇಳಿಲ್ಲ. ವಿನಯ್ ಕುಲಕರ್ಣಿ ಅವರೂ ಹೇಳಿಲ್ಲ, ಎಲ್ಲವೂ ಮಾಧ್ಯಮಗಳು ಸೃಷ್ಟಿ ಮಾಡುತ್ತಿವೆ ಆಕ್ಷೇಪ ವ್ಯಕ್ತಪಡಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಶಿವಲೀಲಾ ಕುಲಕರ್ಣಿ ಅವರು, ನಮ್ಮ ಸಾಹೇಬರು ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ಬರ್ತಾರೆ. ಅವರಿಗೆ ಟಿಕೆಟ್ ಸಿಗುವುದು ಪಕ್ಕಾ. ಅವರೇ ಧಾರವಾಡ ಗ್ರಾಮೀಣ ಅಭ್ಯರ್ಥಿ ಆಗುವರು. ಇನ್ನು ಅಭ್ಯರ್ಥಿ ಪಟ್ಟಿ ಬಿಡುಗಡೆ ಆಗಿಲ್ಲ, ಪಟ್ಟಿ ಬಿಡುಗಡೆ ಮುನ್ನ ಇಂಥ ಊಹಾಪೋಹ, ಚರ್ಚೆಗಳು ಇರುವುದು ಸಹಜ. ಆದರೆ ಇಂಥ ಗೊಂದಲಗಳನ್ನು ಮಾಧ್ಯಮಗಳೇ ಸೃಷ್ಟಿ ಮಾಡುತ್ತಿವೆ ಎಂದು ಆಪಾದಿಸಿದರು.
ಶಿಗ್ಗಾಂವಿಗೆ ನಿಲ್ಲುತ್ತೇನೆ ಅಂತಾ ವಿನಯ್ ಕುಲಕರ್ಣಿ ಅವರು ಹೇಳಿಲ್ಲ, ಹೈಕಮಾಂಡ್ ಸಹ ಹೆಸರು ಪ್ರಕಟಿಸಿಲ್ಲ. ಶಿಗ್ಗಾಂವಿಗೆ ಸ್ಪರ್ಧಿಸುವುದನ್ನೂ ಯಾರೂ ಹೇಳಿಲ್ಲ. ಪದೇ ಪದೆ ಮಾಧ್ಯಮಗಳೇ ಇದನ್ನು ಹೈಲೈಟ್ ಮಾಡುತ್ತಿವೆ ಎಂದು ಶಿವಲೀಲಾ ಅವರು ಗರಂ ಆದರು.
ಇದನ್ನೂಓದಿ:ಕರ್ನಾಟಕ ಚುನಾವಣೆಯಲ್ಲಿ ಸಂಪೂರ್ಣವಾಗಿ ಹೊಸ ಮತಯಂತ್ರಗಳ ಬಳಕೆ: ಮನೋಜ್ ಕುಮಾರ್ ಮೀನಾ