35 ಕಿಮೀ ದೂರ ನಡೆದು ಲಿಂಗಾಭಿಷೇಕಕ್ಕೆ ಗಂಗೆ ಹೊತ್ತು ತಂದ ಈ ಗ್ರಾಮಸ್ಥರು.. ವಿಡಿಯೋ
🎬 Watch Now: Feature Video
ಚಾಮರಾಜನಗರ: ತಾಲೂಕಿನ ಹೆಗ್ಗೋಠಾರ ಗ್ರಾಮದ ಐದು ಮಂದಿ ಪ್ರತಿವರ್ಷ ಶಿವರಾತ್ರಿ ದಿನದಂದು ಬರೋಬ್ಬರಿ 35 ಕಿ.ಮೀ ದೂರದ ನದಿಗೆ ಬರಿಗಾಲಲ್ಲಿ ತೆರಳಿ ಗಂಗೆ ಹೊತ್ತು ತಂದು ಲಿಂಗಾಭಿಷೇಕ ನಡೆಸುತ್ತಾರೆ. ಅದೇ ಗಂಗೆ ಗ್ರಾಮದ ಪ್ರತಿ ಮನೆಗೂ ತೀರ್ಥ ರೂಪದಲ್ಲಿ ಹಂಚಿಕೆಯಾಗುತ್ತದೆ.
ಗ್ರಾಮದ ಸಿದ್ದರಾಮೇಶ್ವರನಿಗೆ ಕಪಿಲಾ ಜಲದಿಂದ ಅಭಿಷೇಕ ಮಾಡುವ ವಿಶಿಷ್ಟ ಸಂಪ್ರದಾಯ ಹಲವು ತಲೆಮಾರುಗಳಿಂದ 5 ವಂಶಸ್ಥರಲ್ಲಿ ನಡೆದುಕೊಂಡು ಬರುತ್ತಿದೆ. ಗ್ರಾಮದ 5 ಕುಟುಂಬಗಳಿಂದ ಸುಮಾರು 35 ಕಿ.ಮೀ. ದೂರದ ನಂಜನಗೂಡು ತಾಲೂಕಿನ ತಗಡೂರು ಬಳಿಯ ಕಪಿಲಾ ನದಿ ದಡಕ್ಕೆ ತೆರಳಿ ಕಪಿಲೆಗೆ ಪೂಜೆ ಸಲ್ಲಿಸಿ, ಬಿಂದಿಗೆಗೆ ಕಪಿಲಾ ಜಲವನ್ನು ತುಂಬಿಸಿಕೊಂಡು ಕಾಲ್ನಡಿಗೆ ಮೂಲಕ ಗ್ರಾಮ ಸೇರುತ್ತಾರೆ. 4 ಬಿಂದಿಗೆಗಳ ನೀರು ಸಿದ್ಧರಾಮೇಶ್ವರನ ಅಭಿಷೇಕಕ್ಕೆ, 1 ಬಿಂದಿಗೆ ನೀರು ಇನ್ನಿತರ ದೇವರ ಅಭಿಷೇಕಕ್ಕೆ ಹಾಗೂ ಗ್ರಾಮದ ಮನೆಗಳಿಗೆ ತೀರ್ಥ ರೂಪದಲ್ಲಿ ಹಂಚಿಕೆಯಾಗುವುದು ಇಲ್ಲಿನ ವಿಶೇಷವಾಗಿದೆ.
ಇದನ್ನೂ ಓದಿ: ಆಹಾರ ಅರಸಿ ನಾಡಿಗೆ ಬಂದ ಕಾಡಾನೆ, ಸಿಮೆಂಟ್ ಟ್ಯಾಂಕ್‌ಗೆ ಬಿದ್ದು ಸಾವು