ಉತ್ತರಾಖಂಡ: 16 ಜನರ ಸಾವಿಗೆ ಕಾರಣವಾದ ಟ್ರಾನ್ಸ್‌ಫಾರ್ಮರ್ ಸ್ಫೋಟದ ವಿಡಿಯೋ

🎬 Watch Now: Feature Video

thumbnail

By

Published : Jul 20, 2023, 10:20 AM IST

ಉತ್ತರಾಖಂಡ: ರಾಜ್ಯದ ಚಮೋಲಿ ಎಂಬಲ್ಲಿ ನಿನ್ನೆ (ಬುಧವಾರ) ಭೀಕರ ವಿದ್ಯುತ್‌ ಅವಘಡ ಸಂಭವಿಸಿತ್ತು. ಒಳಚರಂಡಿ ಸಂಸ್ಕರಣಾ ಘಟಕದಲ್ಲಿ ವಿದ್ಯುತ್​ಪರಿವರ್ತಕ (ಟ್ರಾನ್ಸ್‌ಫಾರ್ಮರ್) ಸ್ಫೋಟಗೊಂಡು 16 ಜನರು ಸಾವನ್ನಪ್ಪಿದ್ದರು. 11 ಜನ ಗಂಭೀರವಾಗಿ ಗಾಯಗೊಂಡಿದ್ದರು. ಇದೀಗ ಘಟನೆಯ ದೃಶ್ಯ ದೊರೆತಿದೆ. ಸ್ಥಳದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಜನರು ಓಡಾಡುತ್ತಿರುವುದು ವಿಡಿಯೋದಲ್ಲಿದೆ.

ಘಟನೆಯಲ್ಲಿ ಮೃತಪಟ್ಟವರಲ್ಲಿ ಓರ್ವ ಪೊಲೀಸ್​ ಸಬ್‌ ಇನ್ಸ್‌ಪೆಕ್ಟರ್​ ಮತ್ತು 3 ಹೋಮ್‌ ಗಾರ್ಡ್​ಗಳು ಸೇರಿದ್ದಾರೆ. ಸಿಎಂ ಪುಷ್ಕರ್​ ಸಿಂಗ್​ ಧಾಮಿ ಘಟನೆಯನ್ನು ಮ್ಯಾಜಿಸ್ಟ್ರೇಟ್​ ತನಿಖೆಗೆ ಆದೇಶಿಸಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಮತ್ತು ಗಾಯಾಳುಗಳಿಗೆ ತಲಾ 1 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ. 

ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯ ಪ್ರಕಾರ, ಅಲಕನಂದಾ ನದಿ ದಡದಲ್ಲಿ ನಮಾಮಿ ಗಂಗೆ ಯೋಜನೆಯ ಕಾಮಗಾರಿ ನಡೆಯುತ್ತಿದೆ. ಮಂಗಳವಾರ ರಾತ್ರಿ ಸ್ಥಳದಲ್ಲಿ ವಿದ್ಯುತ್ ಸ್ಥಗಿತಗೊಂಡಿತ್ತು. ಬುಧವಾರ ಬೆಳಿಗ್ಗೆ ಸಂಪರ್ಕ ಕಲ್ಪಿಸಲಾಗಿತ್ತು. ಆಗ ವಿದ್ಯುತ್​ ಪ್ರವಹಿಸಿದೆ. ಅಲ್ಲಿದ್ದವರು ಶಾಕ್​ಗೆ ಒಳಗಾಗಿ ಸಾವನ್ನಪ್ಪಿದ್ದಾರೆ. ಇದನ್ನು ತಿಳಿದ ಜನರು ಅಲ್ಲಿಗೆ ಧಾವಿಸಿ ಬಂದಿದ್ದು ಅವರಿಗೂ ವಿದ್ಯುತ್​ ಪ್ರವಹಿಸಿ ಸಾವನ್ನಪ್ಪಿದ್ದಾರೆ. 

ಇದನ್ನೂ ಓದಿ: ಜೀವನೋಪಾಯಕ್ಕೆ ಇಟ್ಟುಕೊಂಡಿದ್ದ ಬಟ್ಟೆ ಅಂಗಡಿ ಭಸ್ಮ: ಬೆಸ್ಕಾಂ ಅಧಿಕಾರಿಗಳಿಂದ ನಿರ್ಲಕ್ಷ್ಯ ಆರೋಪ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.