ಫುಟ್ಬಾಲ್ ಆಡುವ ಹಸು: ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ! - cow playing football
🎬 Watch Now: Feature Video
ಫುಟ್ಬಾಲ್ ಆಡುವ ಹಸುವಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ಎಲ್ಲಿ ನಡೆದಿದೆ ಎಂಬ ನಿಖರ ಮಾಹಿತಿ ತಿಳಿದು ಬಂದಿಲ್ಲ. ವಾಸ್ತವವಾಗಿ ಈ ಹಸು ಫುಟ್ಬಾಲ್ ಆಡುವ ಆಟಗಾರರ ನಡುವೆ ಧಾವಿಸಿದೆ. ನಂತರ ಫುಟ್ಬಾಲ್ ಅನ್ನು ವಶಕ್ಕೆ ತೆಗೆದುಕೊಂಡಿದೆ. ಆಟಗಾರರು ಎಷ್ಟೇ ಪ್ರಯತ್ನ ಪಟ್ಟರೂ ಆ ಬಾಲ್ನ್ನು ಅದರ ಕಾಲುಗಳ ನಡುವಿನಿಂದ ತೆಗೆದುಕೊಳ್ಳಲು ಆಗುತ್ತಲೇ ಇರಲಿಲ್ಲ. ಕೊನೆಗೂ ಹೇಗೋ ಬಾಲ್ ತೆಗೆದುಕೊಂಡು ಆಡಲು ಶುರು ಮಾಡಿದ್ದಾರೆ. ಆ ವೇಳೆ, ಬಾಲ್ ಹೋದ ಸ್ಥಳದಲ್ಲೆಲ್ಲಾ ಹಸು ಓಡಾಡಿದೆ. ಈ ದೃಶ್ಯವನ್ನು ನೋಡಿ ಆಟಗಾರರೇ ಶಾಕ್ ಆಗಿದ್ದಾರೆ. ಜೊತೆಗೆ ಸಂಭ್ರಮಪಟ್ಟಿದ್ದಾರೆ.
Last Updated : Feb 3, 2023, 8:25 PM IST